
NFT ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ ಪ್ಯಾನ್ ಇಂಡಿಯಾ ಸ್ಟಾರ್ ?
ಸೆಲೆಬ್ರಿಟಿಗಳು ಈಗಾಗಲೇ ಒಬ್ಬೊಬ್ಬರಾಗಿಯೇ NFT ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಕಮಲ್ ಹಾಸನ್, ಅಮಿತಾಭ್ ಬಚ್ಚನ್, ಸನ್ನಿ ಲಿಯೋನ್ ಈ ಸಾಲಿನಲ್ಲಿ ಗುರುತಿಸಿಕೊಂಡಿದ್ದು
ಇದೀಗ ಸೌತ್ ಇಂಡಸ್ಟ್ರೀಯ ಸೂಪರ್ ಸ್ಟಾರ್ ಒಬ್ರು NFT ವಲಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ಮೂಲಕ ಭಾರತೀಯ ಚಿತ್ರರಂಗದ ಬಿಗೆಸ್ಟ್ ಸಿನಿಮಾವೊಂದು ಶೀರ್ಘದಲ್ಲಿಯೇ NFT ಮಾರುಕಟ್ಟೆಗೆ ಎಂಟ್ರಿ ಕೊಡಲಿದೆಯಂತೆ.
ಮಾರ್ವೆಲ್ಸ್ ಸಿನಿಮಾ ಬಳಿಕ ಭಾರತೀಯ ಸಿನಿಮಾಗಳು NFT ಮಾರುಕಟ್ಟೆಯಲ್ಲಿ ರಾರಾಜಿಸಲು ಸಿದ್ಧವಾಗಿವೆ. ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ನಡಿ ಡಿಜಿಟಲ್ ಲೋಕದಲ್ಲಿ NFT ಹೊಸ ಕ್ರಾಂತಿಗೆ ನಾಂದಿ ಹಾಡಲು ಸಜ್ಜಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ವೊಬ್ಬರು ತಮ್ಮದೇ ಸ್ವತಃ ಮಾರುಕಟ್ಟೆಯಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ NFT ವಲಯದಲ್ಲಿ ಭಾರತೀಯ ಚಿತ್ರರಂಗ ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ.