ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಡಿ ರೌಡಿಗಳ ಅಟ್ಟಹಾಸ: ಮಚ್ಚು ಲಾಂಗು ಹಿಡಿದು ರೋಡ್ ಗೆ ಇಳಿದ ಪುಡಾರಿಗಳು

ಬೆಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿ ಪುಡಿರೌಡಿಗಳ ಹಾವಳಿ ಮಿತಿ ಮೀರಿದೆ. ಹೊಸ್ಕೆರೆಹಳ್ಳಿ ಬಳಿ ಮಚ್ಚು ಲಾಂಗು ಹಿಡಿದ ಪುಡಿ ರೌಡಿಗಳು ಮೊಬೈಲ್​​ ಕಸಿದುಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೋಟಿಲ್ಯಾಂಡ್ ಡಾಭ ಬಳಿ ಗಲಾಟೆ ನಡೆಯುತ್ತಿತ್ತು. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಯುವಕನ ಮೊಬೈಲ್ ಕಿತ್ತು ಪುಡಿ ರೌಡಿಗಳು ಬೆದರಿಸಿದ್ದಾರೆ.

ಆನಂತರ ಯುವಕ ಹರಸಾಹಸ ಮಾಡಿ ಮೊಬೈಲ್​​ ವಾಪಸ್ ಪಡೆದಿದ್ದಾನೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ರೂ ಸ್ಥಳಕ್ಕೆ ಬಂದಿಲ್ಲ ಎಂದು ಯುವಕ ಆಕ್ರೋಶ ಹೊರ ಹಾಕಿದ್ದಾನೆ. ರೋಟಿ ಡಾಬಾ ಬಳಿ ಪದೇ ಪದೇ ಪುಡಿ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದರೂ ಗಿರಿನಗರ ಪೋಲಿಸರು ಕ್ರಮ ಕೈಗೊಂಡಿಲ್ಲ ಅಂತಾ ಸ್ಥಳೀಯರು ಕಿಡಿಕಾರಿದ್ದಾರೆ. ಸಿಸಿಟಿವಿಯ ಡಿವಿಆರ್ ಪಡೆದು ಪೊಲೀಸರು ಪರಿಶೀಲನೆ ಮಾಡ್ತಿದ್ದಾರೆ.

Leave a Reply

Your email address will not be published.