ಡಿಜಿಟಲ್ ವಿಶ್ವವಿದ್ಯಾನಿಲಯವು ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಭೂತಪೂರ್ವ ಹೆಜ್ಜೆ: ಪ್ರಧಾನಿ ಮೋದಿ

ರಾಷ್ಟ್ರೀಯ

ನವದೆಹಲಿ: ಡಿಜಿಟಲ್ ವಿಶ್ವವಿದ್ಯಾನಿಲಯವು ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಭೂತಪೂರ್ವ ಹೆಜ್ಜೆಯಾಗಿದ್ದು, ದೇಶದಲ್ಲಿ ಸೀಟುಗಳ ಕೊರತೆಯ ಸಮಸ್ಯೆಯನ್ನು ಕೊನೆಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. 2022ರ ಕೇಂದ್ರ ಬಜೆಟ್‍ನಲ್ಲಿ ಮಾಡಲಾದ ಘೋಷಣೆಗಳ ಅನುಷ್ಠಾನದ ಕುರಿತು ಶಿಕ್ಷಣ ಸಚಿವಾಲಯದ ವೆಬಿನಾರ್‍ನ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, 2022-23ರ ಕೇಂದ್ರ ಬಜೆಟ್ ಹೊಸದನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೋಂದು ಆಳವಾದ ಶಿಕ್ಷಣ ನೀತಿಯಾಗಿದೆ ಎಂದರು.

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಡಿಜಿಟಲ್ ಸಂಪರ್ಕವು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಚಾಲನೆಯಲ್ಲಿಟ್ಟಿತು ಎಂಬುದನ್ನು ಸಹ ಪ್ರಧಾನಿಯವರು ವೆಬಿನಾರ್‍ನಲ್ಲಿ ಭಾಗವಹಿಸಿದ ಸಭಿಕರಿಗೆ ತಿಳಿಸಿದರು. ಯುವ ಪೀಳಿಗೆಯನ್ನು ಭಾರತದ ಭವಿಷ್ಯ ಅಂತ ವಿವರಿಸಿದ ಅವರು ಸೋಮವಾರ ಭಾರತದ ಭವಿಷ್ಯದ ನಾಯಕರನ್ನು ಸಬಲೀಕರಣಗೊಳಿಸಲು ಕರೆ ನೀಡಿದರು. ನಮ್ಮ ಯುವ ಪೀಳಿಗೆ ದೇಶದ ಭವಿಷ್ಯದ ನಾಯಕರು. ಆದ್ದರಿಂದ ಇಂದಿನ ಯುವ ಪೀಳಿಗೆಯನ್ನು ಸಶಕ್ತಗೊಳಿಸುವುದು ಎಂದರೆ ಭಾರತದ ಭವಿಷ್ಯವನ್ನು ಸಶಕ್ತಗೊಳಿಸುವುದಾಗಿದೆ ಎಂದರು.

2022ರ ಕೇಂದ್ರ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ 5 ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮೊದಲನೆಯದು ಗುಣ ಮಟ್ಟದ ಶಿಕ್ಷಣದ ಸಾರ್ವತ್ರೀಕರಣ, ಎರಡನೆಯದು ಕೌಶಲ್ಯ ಅಭಿವೃದ್ಧಿ, ಮೂರನೆಯದು ನಗರ ಯೋಜನೆ ಮತ್ತು ವಿನ್ಯಾಸ. ನಾಲ್ಕನೆಯದು ಅಂತರಾಷ್ಟ್ರೀಕರಣ – ಭಾರತದಲ್ಲಿ ವಿಶ್ವ ದರ್ಜೆಯ ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ಐದನೆಯದು ಎವಿಜಿಸಿ – ಆನಿಮೇಷನ್ ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಕಾಮಿಕ್ ಆಗಿದೆ ಎಂದರು.

Leave a Reply

Your email address will not be published.