ರಸ್ತೆಯಲ್ಲಿ ಹಸು ಕಟ್ಟಿ ಸಾರ್ವಜನಿಕರಿಗೆ ತೊಂದರೆ: ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರು

ಬೆಂಗಳೂರು: ರಸ್ತೆಯಲ್ಲಿ ಹಸು ಕಟ್ಟಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ವ್ಯಕ್ತಿ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜಣ್ಣ ಹಾಗೂ ಅವರ ಅಳಿಯ ಸುರೇಶ್ ಎನ್ನುವವರ ವಿರುದ್ಧ ಸ್ಥಳೀಯ ನಿವಾಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ರಾಜಣ್ಣ ತಮ್ಮ ಹಸುವನ್ನು ರಸ್ತೆಯಲ್ಲಿ ಕಟ್ಟಿ ತೊಂದರೆ ಮಾಡುತ್ತಿದ್ದಾರೆ. ಹಸು ಕಟ್ಟಿ ಸಾರ್ವಜನಿಕರಿಗೆ ತುಂಬಾ ಕಿರುಕುಳ ಕೊಡುತ್ತಿದ್ದು, ಕೇಳಲು ಹೋದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಹಸುವಿನ ತಾಜ್ಯದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೆಲವರು ಜಾರಿ ಬಿದ್ದು ಗಾಯ ಕೂಡ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

Leave a Reply

Your email address will not be published.