OTTಯಲ್ಲಿ ರಿಲೀಸ್ ಆಗಲು ಸಜ್ಜಾದ ‘’777 ಚಾರ್ಲಿ’’..! ಯಾವಾಗ ಗೊತ್ತಾ..?

ಚಲನಚಿತ್ರ

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಕಮಾಯಿ ಮಾಡಿದೆ. ಚಾರ್ಲಿ ಮತ್ತು ಧರ್ಮನ ಭಾವನಾತ್ಮಕ ಪಯಣಕ್ಕೆ  ಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರಮಂದಿರಂಗಳಲ್ಲಿ ರಾರಾಜಿಸುತ್ತಿರುವ 777 ಚಾರ್ಲಿ 150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ. ಕಿರಣ್ ರಾಜ್ ಸಾರಥ್ಯದಲ್ಲಿ ಬಂದ 777 ಚಾರ್ಲಿ ಸಿನಿಮಾ ಸೂಪರ್ ಸಕ್ಸಸ್ ಕಾಣುತ್ತಿದ್ದಂತೆ ಒಟಿಟಿಗೆ ಎಂಟ್ರಿ ಕೊಡುತ್ತಿದೆ.

ಹೌದು, 777 ಚಾರ್ಲಿ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಸಿನಿಮಾ ರಿಲೀಸ್ ಆಗಿ 25 ದಿನಗಳಾಗಿದೆ. ಈ ಸಮಯದಲ್ಲಿ ಚಾರ್ಲಿ ಒಟಿಟಿ ರಿಲೀಸ್ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಒಟಿಟಿ ಪ್ರೇಕ್ಷಕರ ಮುಂದೆ ಚಾರ್ಲಿ ಜುಲೈ 29ರಂದು ಬರುತ್ತಿದೆ. ಈಗಾಗಲೇ ಸಿನಿಮಾತಂಡ ಒಟಿಟಿ ಹಕ್ಕನ್ನು ವೂಟ್ ಸೆಲೆಕ್ಟ್2ಗೆ ಮಾರಾಟ ಮಾಡಿತ್ತು. ಅದರಂತೆ ಜುಲೈ 29ರಂದು 777 ಚಾರ್ಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

Leave a Reply

Your email address will not be published.