ಏಕಾಏಕಿಯಾಗಿ ಉಕ್ಕಿ ಬಂದ ಅಂಬ್ಲಿ ಹಳ್ಳ: ಟ್ರಾಕ್ಟರ್ ಮೂಲಕ ಹಳ್ಳ ದಾಟಿದ ಮಕ್ಕಳು

ಜಿಲ್ಲೆ

ಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಸುರಿದ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ತಾಲ್ಲೂಕಿನ ಹಲವು ಸಣ್ಣ ಪುಟ್ಟ ಹಳ್ಳಗಳು ತುಂಬಿ ಹರಿಯುತ್ತಿದ್ದು, ನವಲಗುಂದ ಪಟ್ಟಣದಿಂದ ಇಬ್ರಾಹಿಂಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿದ್ದ ಅಂಬ್ಲಿ ಹಳ್ಳ ತುಂಬಿ ಬಂದಿದೆ. ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಹಾಗೂ ರೈತರು ಜಮೀನುಗಳಿಗೆ ತೆರಳಲಾಗದೆ ಪರದಾಟ ನಡೆಸುವಂತಾಗಿದೆ.

ಮಕ್ಕಳನ್ನು ಟ್ರ್ಯಾಕ್ಟರ್ ಮೂಲಕ ಹಳ್ಳದಾಟಿಸುವಂತಹ ಅಪಾಯಕಾರಿ ಸಾಹಸಕ್ಕೆ ಸಾರ್ವಜನಿಕರು ಮುಂದಾಗಿದ್ದರು. ಏನಾದರೂ ಅವಘಡ ಸಂಭವಿಸಿದರೆ ಹೊಣೆ ಯಾರು ಎಂಬ ಪ್ರಶ್ನೆ ಪಾಲಕರಲ್ಲಿ ಹುಟ್ಟಿಕೊಂಡಿದೆ. ಸಂಪೂರ್ಣ ರಸ್ತೆ ಜಲಾವೃತಗೊಂಡಿದ್ದು, ರಸ್ತೆ ಬಂದ್ ಆಗಿದೆ. ಈ ಹಿನ್ನೆಲೆ ಈ ರಸ್ತೆಯಲ್ಲಿ ಎರಡು ಹಳ್ಳಗಳಿವೆ. ಎರಡು ಹಳ್ಳಕ್ಕೂ ಕಿರು ಸೇತುವೆ ನಿರ್ಮಾಣವಾದಲ್ಲಿ ವಿದ್ಯಾರ್ಥಿಗಳ, ರೈತರ, ಸಾರ್ವಜನಿಕ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.

ತಪ್ಪಿದ ಗೋಳಾಟ ನವಲಗುಂದ ತಾಲೂಕಿನ ಜನರಿಗೆ ಪ್ರವಾಹ ಹಾಗೂ ಅತೀವೃಷ್ಟಿಯಿಂದ ಗೋಳು ಹೇಳತೀರದಾಗಿದೆ. ಕುಂದಗೋಳ ತಾಲೂಕಿನ ಮೇಲ್ಭಾಗದಲ್ಲಿ ಮಳೆಯಾದರೆ ನವಲಗುಂದ ಜನರಿಗೆ  ಪ್ರವಾಹ ಕಟ್ಟಿಟ್ಟ ಬುತ್ತಿ. ಇದರಿಂದಾಗಿ ಪ್ರವಾಹ ಬಂದು ಸಾಕಷ್ಟು ಜಮೀನುಗಳಿಗೆ ನೆರೆಯ ಹಿನ್ನೀರು ನುಗ್ಗಿ ಬೆಳೆ ಹಾಳಾಗುತ್ತಿವೆ. ಇನ್ನು ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪಡಬಾರದ ಕಷ್ಟ ಪಡುತ್ತಾರೆ.  ಇನ್ನು ಹಳ್ಳ ಕೊಳ್ಳ ಗಳ ಅಕ್ಕ ಪಕ್ಕದಲ್ಲಿನ ಜಮೀನುಗಳಿಗೆ ಈಗಾಗಲೇ ಸಾಕಷ್ಟು ಸಲ ನೀರು ನುಗ್ಗಿ ಬೆಳೆ ಹಾನೀಯಾದರು ಸರಿಯಾದ ರೀತಿಯಲ್ಲಿ ಬೆಳೆ ಪರಿಹಾರ ಕೊಟ್ಟಿಲ್ಲ. ಮೇಲಿಂದ ಮೇಲೆ ರೈತರು ಹೋರಾಟ,‌ಮನವಿ, ಧರಣಿ ಮಾಡಿದರು ಏನು ಪ್ರಯೋಜನವಾಗಿಲ್ಲ.

Leave a Reply

Your email address will not be published.