
ಹೆಲ್ಮೆಟ್ ಇದ್ದರೂ ಧರಿಸದ ಯುವಕ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಸಾವು
ಬೆಂಗಳೂರು : ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಾಗರಭಾವಿಯ ನಮ್ಮೂರ ತಿಂಡಿ ಅಂಡರ್ ಪಾಸ್ ಬಳಿ ನಡೆದಿದೆ. ಯತೀಶ್ ಮೃತಪಟ್ಟ ಯುವಕನಾಗಿದ್ದು, ಘಟನೆಯಲ್ಲಿ ಹಿಂಬದಿ ಸವಾರ ಹರ್ಷಿತ್ ಗೆ ಗಂಭೀರ ಗಾಯಗಳಾಗಿದೆ. ಇಬ್ಬರು ಮೂಡಲಪಾಳ್ಯದ ನಿವಾಸಿಗಳಾಗಿದ್ದು, ಹೆಲ್ಮೆಟ್ ಧರಿಸದೇ ಬೇಜವಾಬ್ದಾ ರಿಯಿಂದ ಚಲಾಯಿಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಚಾಲಕ ಕೆಳಗೆ ಬಿದ್ದು ತೀವ್ರ ರಕ್ತಸ್ರಾವವಾದ ಹಿನ್ನೆಲೆ ಸ್ಥಳದಲ್ಲೇ ಮೃತಪ ಟ್ಟಿದ್ದಾರೆ. ಈ ಸಂಬಂಧ ಕಾಮಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.