ಸಂಘರ್ಷ ಪೀಡಿತ ಉಕ್ರೇನ್ ನಿಂದ ತಾಯ್ನಾಡಿಗೆ ಮರಳಿದ 200ಕ್ಕೂ ಅಧಿಕ ಭಾರತೀಯರು..!

ರಾಷ್ಟ್ರೀಯ

ನವದೆಹಲಿಉಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬೆನ್ನಲ್ಲೇ, ಉಕ್ರೇನ್​ನಲ್ಲಿ ನೆಲೆಸಿದ್ದ ಭಾರತೀಯರಿದ್ದ ಏರ್​ ಇಂಡಿಯಾ ವಿಮಾನ ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಭಾರತ ಸರ್ಕಾರ ಉಕ್ರೇನ್​ನಲ್ಲಿ ನೆಲೆಸಿರುವ ಭಾರತೀಯರು ದೇಶ ತೊರೆಯುವಂತೆ ಮನವಿ ಮಾಡಿ, ವಿಶೇಷ ವಿಮಾನ ವ್ಯವಸ್ಥೆ ಮಾಡಿತ್ತು. ಅದರಂತೆ ಮೊದಲ ವಿಮಾನ 2 ದಿನಗಳ ಹಿಂದೆಯೇ 241 ಜನರನ್ನು ದೇಶಕ್ಕೆ ತಂದಿಳಿಸಿತ್ತು.

ಅದರಂತೆ ನಿನ್ನೆ ರಾತ್ರಿಯೇ ಉಕ್ರೇನ್​ನಿಂದ 2 ನೇ ವಿಶೇಷ ವಿಮಾನ ಮತ್ತಷ್ಟು ಭಾರತೀಯರನ್ನು ಹೊತ್ತು ಇಂದು ಬೆಳಗ್ಗೆ ದೆಹಲಿ ನಿಲ್ದಾಣಕ್ಕೆ ಬಂದಿಳಿದಿದೆ. ‘ಉಕ್ರೇನ್​ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ನಾವು ಅಲ್ಲಿಂದ ಹೊರಡಲು ಸಿದ್ಧವಾದೆವು. ಅದರಂತೆ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಮಾನದ ವ್ಯವಸ್ಥೆ ಬಗ್ಗೆ ತಿಳಿದು ಕೊಂಡು, ಇದೀಗ ತಾಯ್ನಾಡಿಗೆ ವಾಪಸ್​ ಬಂದಿದ್ದೇವೆ’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

Leave a Reply

Your email address will not be published.