Home District ದೇಶಾದ್ಯಂತ ಆಮ್ಲಜನಕಕ್ಕೆ ಎಲ್ಲಿಲ್ಲದ ಬೇಡಿಕೆ; ಆಕ್ಸಿಜನ್ ಉತ್ಪಾದನೆಯಲ್ಲಿ ಮಲೆನಾಡಿನ ಪಾತ್ರ

ದೇಶಾದ್ಯಂತ ಆಮ್ಲಜನಕಕ್ಕೆ ಎಲ್ಲಿಲ್ಲದ ಬೇಡಿಕೆ; ಆಕ್ಸಿಜನ್ ಉತ್ಪಾದನೆಯಲ್ಲಿ ಮಲೆನಾಡಿನ ಪಾತ್ರ

ದೇಶಾದ್ಯಂತ ಆಮ್ಲಜನಕಕ್ಕೆ ಎಲ್ಲಿಲ್ಲದ ಬೇಡಿಕೆ; ಆಕ್ಸಿಜನ್ ಉತ್ಪಾದನೆಯಲ್ಲಿ ಮಲೆನಾಡಿನ ಪಾತ್ರ

533
0

ಪ್ರಸ್ತುತ ದೇಶಾದ್ಯಂತ ಕೋವಿಡ್ ಕಾರಣದಿಂದ ಆಮ್ಲಜನಕಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇಂಥ ಕಾಲಘಟ್ಟದಲ್ಲಿ ಹೆಚ್ಚಿನ ಆಮ್ಲಜನಕ ಹೊರಸೂಸುವ ಸಸ್ಯಗಳ ಬಗ್ಗೆ ಗಂಭೀರ ಚಿಂತನೆ, ಚರ್ಚೆ ನಡೆದಿದೆ. ಈ ವೇಳೆ ಪ್ರಮುಖವಾಗಿ ರಾಜ್ಯದ ಮಲೆನಾಡಿನ ರೈತರ ಜೀವನಾಡಿಯಾದ ಅಡಕೆ ಮರದ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪವಾಗುತ್ತಿದೆ.

ಜೀವ ಸಂಕುಲಕ್ಕೆ ಶುದ್ಧ ಗಾಳಿ ಒದಗಿಸುವಲ್ಲಿ ಮಲೆನಾಡಿನ ಪ್ರಮುಖ ತೋಟಗಾರಿಕೆ ಬೆಳೆಯಾದ ಅಡಕೆಯ ಪಾಲು ಪ್ರಮುಖವಾಗಿದೆ. ಪ್ರತಿ ಹೆಕ್ಟೇರ್ ತೋಟದ ಅಡಕೆ ಮರಗಳು ನಿತ್ಯವೂ ಸರಾಸರಿ 6ರಿಂದ 7 ಟನ್ ಆಮ್ಲಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ.ಈ ಮೂಲಕ ಅಡಕೆಯು ಜೀವರಕ್ಷಣೆಗೂ ಮೂಲ ಎಂಬುದು ಸಾಬೀತಾಗುತ್ತಿದೆ. ಪ್ರತಿ ಹೆಕ್ಟೇರ್ ಅಡಕೆ ತೋಟವು ನಿತ್ಯ 125ರಿಂದ 150 ಟನ್ ಕಾರ್ಬನ್ ಡೈಆಕ್ಸೈಡ್ ಹೀರಿಕೊಂಡು ಹೇರಳ ಪ್ರಮಾಣದ ಆಮ್ಲಜನಕ ಬಿಡುಗಡೆ ಮಾಡುತ್ತದೆ. ಅಡಕೆಯ ಈ ಗುಣವು ಅಡಕೆಯ ಭವಿಷ್ಯದ ಜತೆ ಮಾನವ ಸಂಕುಲದ ಭವಿಷ್ಯಕ್ಕೂ ಉತ್ತಮ ಸೂಚನೆಯಾಗಿದೆ ಎಂಬುದು ತಜ್ಞರ ಅಭಿಮತ.

ನಿತ್ಯ 14 ಲಕ್ಷ ಟನ್ ಆಮ್ಲಜನಕ: ದೇಶದಲ್ಲಿ ಅಂದಾಜು 5 ಲಕ್ಷ ಹೆಕ್ಟೇರ್ ಹಾಗೂ ರಾಜ್ಯದಲ್ಲಿ ಅಂದಾಜು 2 ಲಕ್ಷ ಹೆಕ್ಟೇರ್​ಗಿಂತಹೆಚ್ಚಿನ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ರಾಜ್ಯದ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಡಕೆ ತೋಟಗಾರಿಕೆ ಬೆಳೆಯಲ್ಲಿ ಪ್ರಥಮ ಸ್ಥಾನಕ್ಕೇರುತ್ತಿದೆ. ಪ್ರತಿ ಹೆಕ್ಟೇರ್ ತೋಟವು ಪ್ರತಿ ದಿನ ಇಂಗಾಲಾಮ್ಲ ಹೀರಿಕೊಂಡು ಸರಾಸರಿ ಆರೇಳು ಟನ್ ಆಮ್ಲಜನಕ ಉತ್ಪಾದಿಸುತ್ತಿದ್ದು, ರಾಜ್ಯವೊಂದರಲ್ಲೇ ನಿತ್ಯವೂ ಅಂದಾಜು 12ರಿಂದ 14 ಲಕ್ಷ ಟನ್ ಆಮ್ಲಜನಕ ಉತ್ಪಾದನೆ ಅಡಕೆ ತೋಟಗಳಿಂದ ಆಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಇದು ನಿತ್ಯ ಅಂದಾಜು 35 ಲಕ್ಷ ಟನ್ ಉತ್ಪಾದನೆ ಆಗುತ್ತದೆ ಎಂಬುದು ಅಡಕೆ ಬಗ್ಗೆ ವಿಶೇಷ ಸಂಶೋಧನೆ ಕೈಗೊಂಡ ಸಸ್ಯ ವಿಜ್ಞಾನಿಗಳ ಅಭಿಪ್ರಾಯ.

ಮಾನವನ ಆರೋಗ್ಯಕ್ಕೆ ಪೂರಕ: ಅಡಕೆ ಬೆಳೆಯುವ ಜಿಲ್ಲೆಗಳ ವ್ಯಾಪ್ತಿಯಲ್ಲಿ ಶುದ್ಧ ಗಾಳಿಯ ಪ್ರಮಾಣ ಹೆಚ್ಚಿದೆ. ವಾತಾವರಣದಲ್ಲಿನ ಮಾಲಿನ್ಯದ ಪ್ರಮಾಣವೂ ಕಡಿಮೆಯಿದೆ ಎಂಬುದು ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಮಾನವನಿಗೆ ಕೃತಕ ಆಮ್ಲಜನಕ ನೀಡಿಕೆಗೂ, ವಾತಾವರಣದಲ್ಲಿನ ಆಮ್ಲಜನಕಕ್ಕೂ ನೇರ ಸಂಬಂಧ ವಿಲ್ಲದಿದ್ದರೂ ವ್ಯಕ್ತಿಯ ದೈನಂದಿನ ಆರೋಗ್ಯ, ರೋಗ ನಿರೋಧಕ ಶಕ್ತಿ ವೃದ್ಧಿಗೆ ಇದರಿಂದ ಸಹಾಯವಾಗುತ್ತದೆ. ಹೀಗಾಗಿ ಅಅಡಕೆ ಮರಗಳನ್ನು ಬೆಳೆಸುವುದು ಮಾನವನ ಜೀವನಕ್ಕೆ ಪೂರಕ ಎನ್ನುತ್ತಾರೆ ತಜ್ಞರು.

ಇನ್ನೊಂದು ಅಡಕೆ ತಳಿ: ಅರೇಕಾ ಪಾಮ್ ಎನ್ನುವ ಅಲಂಕಾರಿಕ ಸಸ್ಯವಿದೆ. ಅಡಕೆಯ ತಳಿಗಳಲ್ಲಿ ಇದೂ ಒಂದು ಪ್ರಭೇದ. ಇದರಲ್ಲಿ ಕಾಯಿ ಬಿಡುವುದಿಲ್ಲ. ಇದು ಜಗತ್ತಿನಲ್ಲಿ ಅತ್ಯಧಿಕ ಆಮ್ಲಜನಕ ತಯಾರಿಸುವ ಐದು ಪ್ರಮುಖ ಸಸ್ಯಗಳಲ್ಲಿ ಒಂದಾಗಿದೆ. ಇದು ಹಗಲು ಹೊತ್ತಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇಂಗಾಲಾಮ್ಲವನ್ನು ನುಂಗಿ ಆಮ್ಲಜನಕವಾಗಿ ಪರಿವರ್ತಿಸುತ್ತದೆ. ಇದು ಗಾಳಿಯಲ್ಲಿರುವ ಹಲವು ಬಗೆಯ ವಿಷಕಾರಕ ಅಂಶಗಳನ್ನು ತೆಗೆಯುತ್ತದೆ. ಈ ಸಸ್ಯವನ್ನು ವಾಸದ ಮನೆಯ ಒಳಗೆ ಕುಂಡದಲ್ಲಿ ಬೆಳೆಸಬಹುದು ಎನ್ನುತ್ತಾರೆ ಸಸ್ಯ ಸಂಶೋಧಕರು.

ಅಡಕೆ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ದೃಢಪಡಿಸುವುದು ಅಗತ್ಯ. ಅಡಕೆ ಮರಗಳು ಉತ್ಪಾದನೆ ಮಾಡುವ ಆಕ್ಸಿಜನ್ ಪ್ರಮಾಣವನ್ನೂ ವೈಜ್ಞಾನಿಕವಾಗಿ ದಾಖಲಿಸುವ ಕೆಲಸವಾಗಬೇಕು. ಇದರಿಂದ ಅಡಕೆ ಬೆಳೆಗೆ ಮತ್ತಷ್ಟು ಬಲ ಸಿಕ್ಕಂತಾಗುತ್ತದೆ. ನೈಸರ್ಗಿಕ ವಾಗಿ ಎಲ್ಲ ಮರಗಳು ಆಮ್ಲಜನಕ ಬಿಡುಗಡೆ ಮಾಡುವಂತೆ ಅಡಕೆ ಮರಗಳೂ ಆಮ್ಲಜನಕ ಉತ್ಪಾದನೆ ಮಾಡುತ್ತವೆ. ನಮ್ಮ ಪೂರ್ವಜರು ಅಡಕೆಯನ್ನು ಒಂದು ವಾಣಿಜ್ಯ ಬೆಳೆಯಾಗಿ ಗಮನಿಸಿದ ಸಂದರ್ಭ ದಲ್ಲೇ ಅಡಕೆ ಮರದ ಬಹೂ ಪಯೋಗವನ್ನೂ ಅರಿತಿದ್ದರು. ಇಂದಿನ ಪೀಳಿಗೆಗೆ ಅದನ್ನು ತಿಳಿಸುವ ಕೆಲಸವಾಗಬೇಕಿದೆ.

ಅಡಕೆ ತೋಟದಲ್ಲಿನ ಅಡಕೆ ಮರಗಳು ಹಗಲು ವೇಳೆ ಮಾತ್ರವಲ್ಲದೆ ರಾತ್ರಿಯೂ ಆಮ್ಲಜನಕ ನೀಡುತ್ತವೆ. ಪ್ರತಿ ಗಿಡ ಎಷ್ಟು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಎಂಬುದು ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಇಂಗಾಲಾಮ್ಲ, ವಾತಾವರಣದ ತೇವಾಂಶ ಹಾಗೂ ಸೂರ್ಯ ರಶ್ಮಿಯನ್ನು ಹೀರುವ ಕ್ಷಮತೆಯೇ ಈ ಸಾಮರ್ಥ್ಯಕ್ಕೆ ಅಳತೆಗೋಲು. ಅಡಕೆ ಮರಗಳು ಈ ಮೂರನ್ನೂ ಉಪಯೋಗಿಸಿಕೊಂಡು ರಾತ್ರಿ ವೇಳೆ ಆಮ್ಲಜನಕ ಬಿಡುಗಡೆ ಮಾಡುವ ಶಕ್ತಿ ಹೊಂದಿವೆ. ಇದರಿಂದ ವಾತಾವರಣದಲ್ಲಿರುವ ವಿಷಕಾರಕ ಅಂಶಗಳೂ ಶುದ್ಧಗೊಳ್ಳುತ್ತವೆ.

VIAದೇಶಾದ್ಯಂತ ಆಮ್ಲಜನಕಕ್ಕೆ ಎಲ್ಲಿಲ್ಲದ ಬೇಡಿಕೆ; ಆಕ್ಸಿಜನ್ ಉತ್ಪಾದನೆಯಲ್ಲಿ ಮಲೆನಾಡಿನ ಪಾತ್ರ
SOURCEದೇಶಾದ್ಯಂತ ಆಮ್ಲಜನಕಕ್ಕೆ ಎಲ್ಲಿಲ್ಲದ ಬೇಡಿಕೆ; ಆಕ್ಸಿಜನ್ ಉತ್ಪಾದನೆಯಲ್ಲಿ ಮಲೆನಾಡಿನ ಪಾತ್ರ
Previous articleಕೋವಿಡ್ ಆಸ್ಪತ್ರೆಯಲ್ಲಿ ಮಂಗಳವಾರ 21 ಮಂದಿ ಸಾವು
Next articleಲಸಿಕೆ ದಂಧೆಯ ಕರಾಳ ಮುಖ ಬಯಲು!

LEAVE A REPLY

Please enter your comment!
Please enter your name here