ಪಾಕಿಸ್ತಾನ್ ರಾಜಕಾರಣಿ ಕಾರು ಓವರ್ ಟೇಕ್: ಹಿಂದೂ ಕುಟುಂಬದ ಮೇಲೆ ಹಲ್ಲೆ

ಅಂತರಾಷ್ಟ್ರೀಯ

ಇಸ್ಲಾಮಬಾದ್: ರಾಜಕಾರಣಿ ಸಂಬಂಧಿಯೊಬ್ಬರ ಕಾರ್ ಓವರ್‌ಟೇಕ್ ಮಾಡಿದ ಕಾರಣಕ್ಕೆ ಹಿಂದೂ ಕುಟುಂಬದ ಮೇಲೆ ಹಲ್ಲೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ರಾಜಕಾರಣಿಯ ಸಂಬಂಧಿಕರು ಕಾರಿನಲ್ಲಿ ತೆರಳುತ್ತಿದ್ದು ಈ ವೇಳೆ ಹಿಂದಿನಿಂದ ಬಂದ ಹಿಂದೂ ಕುಟುಂಬದವರ ಕಾರು ರಾಜಕಾರಣ ಸಂಬಂಧಿಯ ಕಾರನ್ನು ಓವರ್ ಟೇಕ್ ಮಾಡಿದೆ. ಇದರಿಂದ ರೊಚ್ಚಿಗೆದ್ದ ರಾಜಕಾರಣಿ ಸಂಬಂಧಿಕರು ಪ್ರಯಾಣಿಸುತ್ತಿದ್ದ ಕಾರಿನವರು ಹಿಂದೂ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಈ ಹಿನ್ನೆಲೆ ಆ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಿಯರನ್ನು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಘಟನೆ ಹಿನ್ನೆಲೆ: ಸಿಂಧ್‍ನ ಕುಟುಂಬವು ಒಬ್ಬ ಪುರುಷ, ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಕಾರಿನಲ್ಲಿ ಹೋಗುತ್ತಿದ್ದರು. ಮೀರ್‍ಪುರ್ ಮಾಥೆಲೋ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಘೋಟ್ಕಿ ಬಳಿಯ ರೆಸ್ಟೋರೆಂಟ್‍ನಲ್ಲಿ ರಹರ್ಕಿ ಸಾಹಿಬ್ ಎಂಬ ಪ್ರದೇಶದ ದೇವಸ್ಥಾನದಿಂದ ಹಿಂದಿರುಗುತ್ತಿದ್ದಾಗ ಅವರ ಮೇಲೆ ರಾಜಕಾರಣಿ ಸಂಬಂಧಿ ದಾಳಿ ಮಾಡಿದ್ದಾನೆ.

ಸ್ಥಳೀಯ ರಾಜಕಾರಣಿಯೊಬ್ಬರ ಸೋದರ ಸಂಬಂಧಿ ಶಂಶೇರ್ ಪಿತಾಫಿ ಅವರ ವಾಹವನ್ನು ಸಿಂಧ್ ನ ಕುಟುಂಬವೊಂದು ಪದೇ ಪದೇ ಓವರ್ ಟೇಕ್ ಮಾಡಿ ಮುಂದೆ ಹೋಗುತ್ತಿದ್ದರು. ಈ ವೇಳೆ ಮೀರ್ ಪುರ್ ಮಾಥೆಲೋ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಘೋಟ್ಕಿ ಬಳಿಯ ರೆಸ್ಟೋರೆಂಟ್‍ನಲ್ಲಿ ರಹರ್ಕಿ ಸಾಹಿಬ್ ಎಂಬ ಪ್ರದೇಶದ ದೇವಸ್ಥಾನದಿಂದ ಹಿಂದಿರುಗುತ್ತಿದ್ದಾಗ ರಾಜಕಾರಣಿ ಕುಟುಂಬದವರು ಹಿಂದೂ ಕುಟುಂಬದವರ ಕಾರನ್ನು ನಿಲ್ಲಿಸಿದ್ದಾರೆ. ಬಳಿಕ ಅವರ ಜೊತೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದಾರೆ.

ಸುಮಾರು 12 ಪುರುಷರು ಕಾರನ್ನು ಒಡೆದು ಕಾರಿನಲ್ಲಿದ್ದ ಅಜಯ್‍ಕುಮಾರ್‌ಗೆ ಥಳಿಸಿ ಗಾಯಗೊಳಿಸಿದ್ದಾರೆ. ಸದ್ಯ  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ.

Leave a Reply

Your email address will not be published.