5ನೇ ತರಗತಿ ಬಾಲಕಿಯ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದ ಪೋಷಕರು..! ಶಿಕ್ಷಕರಿಂದ ರಕ್ಷಣೆ

ಜಿಲ್ಲೆ

ದಾವಣಗೆರೆ : ದಾವಣಗೆರೆ ಜಿಲ್ಲೆಯ ಸರಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪೋಷಕರ ಆಶಯದಂತೆ ಮದುವೆ ಯಾಗಿ ತನ್ನ ಅಮೂಲ್ಯ ಬಾಲ್ಯ ಜೀವನವನ್ನು ಮಾತ್ರವಲ್ಲ ಶಾಲಾ ಕಲಿಕೆಯನ್ನು ಕಳೆದುಕೊಳ್ಳಬೇಕಾಗಿತ್ತು. ಆದರೆ ಎಚ್ಚೆತ್ತ ಆಕೆಯ ಶಾಲಾ ಶಿಕ್ಷಕರು ಗ್ರಾಮಸ್ಥರ ಸಹಾಯದಿಂದ 5ನೇ ತರಗತಿ ವಿದ್ಯಾರ್ಥಿನಿಯ ಬಾಲ್ಯವಿವಾಹವಾಗುವುದನ್ನು ತಡೆದಿದ್ದಾರೆ. ಇದು ನಡೆದಿರುವುದು ದಾವಣಗೆರೆ  ಜಿಲ್ಲೆಯ ಸಂತೆಬೆನ್ನೂರು ಎಂಬ ಗ್ರಾಮದಲ್ಲಿ.

ವಿದ್ಯಾರ್ಥಿನಿ ತನ್ನ ಎಸ್‌ಬಿಆರ್‌ ಕಾಲೊನಿಯಲ್ಲಿ ಅಜ್ಜಿಮನೆಯಲ್ಲಿ ವಾಸವಾಗಿದ್ದಳು. ಕಳೆದ ಹಲವು ತಿಂಗಳುಗಳಿಂದ ಶಾಲೆಗೆ ಹೋಗುತ್ತಿ ರಲಿಲ್ಲ.  ಹೀಗಾಗಿ ಈ ಬಗ್ಗೆ ಶಾಲೆಯ ಶಿಕ್ಷಕರು ಪ್ರಶ್ನಿಸಿದಾಗ ಆಕೆಯ ಪೋಷಕರು ಮದುವೆ ಮಾಡಲು ಮುಂದಾಗಿದ್ದಾರೆ ಎಂದು ವಿಷಯ ತಿಳಿದು ಬಂತು. ಕೂಡಲೇ ಎಚ್ಚೆತ್ತ ಶಾಲೆಯ ಶಿಕ್ಷಕರು ಗ್ರಾಮಸ್ಥರ ಸಹಾಯದಿಂದ ಪೋಷಕರ ಮನವೊಲಿಸಿ ಮದುವೆ ಮಾಡದೆ ಶಿಕ್ಷಣ ಕೊಡಿಸಿ ಎಂದು ಬುದ್ದಿ ಹೇಳಿದ್ದಾರೆ.

ವಿದ್ಯಾರ್ಥಿನಿಯ ತಂದೆ ವಿಜಯಪುರದವರಾಗಿದ್ದು ತಾಯಿ ಸಂತೆಬೆನ್ನೂರಿನ ಗೊಲ್ಲರಹಳ್ಳಿ ಗ್ರಾಮದವರು. ಇಬ್ಬರೂ ಕೂಡ ದಿನಗೂಲಿ ನೌಕರರು. ಬಡವರಾಗಿದ್ದು ತಮ್ಮ ಮಗಳನ್ನು ಸಾಕಿ, ಸಲಹಿ ಶಾಲೆಗೆ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಮದುವೆ ಮಾಡಲು ಮುಂದಾಗಿದ್ದರು ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ. ಏನೇ ಆಗಲಿ ತಮ್ಮ ವಿದ್ಯಾರ್ಥಿಯ ಸುಂದರ ಬಾಲ್ಯ ಜೀವನವು ನರಕದ ಬಾಲ್ಯವಾಗದೆ ಇರಲಿ ಎಂಬ ಶಿಕ್ಷಕರ ನಿಲುವಿಗೆ ಧನ್ಯವಾದ ಹೇಳಲೇ ಬೇಕು.

Leave a Reply

Your email address will not be published.