Home Cinema ಕಳೆದುಹೋಗಲಿದ್ದನಾ ಪ್ರೇಕ್ಷಕ ಫ್ಯಾಂಟಮ್ ನ ಫಾರೆಸ್ಟ್ ಲೋಕ ನೊಡಿ…… ?

ಕಳೆದುಹೋಗಲಿದ್ದನಾ ಪ್ರೇಕ್ಷಕ ಫ್ಯಾಂಟಮ್ ನ ಫಾರೆಸ್ಟ್ ಲೋಕ ನೊಡಿ…… ?

300
0
SHARE

ಬೆಂಗಳೂರು. ಗಿಡ-ಮರಗಳಿಂದ ತುಂಬಿರುವ, ಮೇಲ್ನೋಟಕ್ಕೆ ದಟ್ಟ ಕಾನನದಂತೆ ಕಾಣ್ಸುವ ಈ ಪ್ರಪಂಚವಿದೆಯಲ್ಲಾ.. ಇದು, ಬೇರ‍್ಯಾವ ಪ್ರಪಂಚ ಅಲ್ಲ. ಬದ್ಲಿಗೆ ಫ್ಯಾಂಟಮ್ ಪ್ರಪಂಚ. ಯಸ್, ಫ್ಯಾಂಟಮ್ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ನಿರೀಕ್ಷಿತ ಸಿನಿಮಾ. ವಿಕ್ರಾಂತ ರೋಣ ಎಂಬ ಹೆಸ್ರಿನಿಂದನೇ ಸುದೀಪಿಯನ್ಸ್ ರೋಮಾಂಚನಕ್ಕೆ ಕಾರಣವಾಗಿರುವ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಇದೇ ಜುಲೈ ಒಂದರಿಂದ ಮತ್ತೆ ಶುರುವಾಗಲಿದೆ.

ಇದಕ್ಕೆ ಮುನ್ನುಡಿ ಅನ್ನುವಂತೆ ಸೆಟ್ ವರ್ಕ್ ಜೋರಾಗಿಯೇ ನಡೆಯುತ್ತಿದೆ ಫ್ಯಾಂಟಮ್ ನ ಅಂಗಳದಲ್ಲಿ. ನಿಮಗೆ ಗೊತ್ತಿರಲಿ, ಫ್ಯಾಂಟಮ್ ಅಖಾಡ ಹಸಿರಿನಿಂದ ತುಂಬಿರಲಿ ಎನ್ನುವ ಉದ್ದೇಶದಿಂದಲೇ ಬರೋಬ್ಬರಿ 22 ಲಾರಿಗಳಲ್ಲಿ ರಾಜಮಂಡ್ರಿಯಿಂದ ಗಿಡ ಹಾಗೂ ಮರಗಳನ್ನ ತರಿಸಲಾಗಿದೆ. ಇದಕ್ಕೆ ಖರ್ಚಾಗಿರೋದು 30 ರಿಂದ 40 ಲಕ್ಷ. ಅಂದ ಹಾಗೇ ಲಾಕ್ ಡೌನ್ ಗೂ ಮುನ್ನವೇ ಗಿಡ ಮರಗಳನ್ನ ಖರೀದಿ ಮಾಡಲಾಗಿತ್ತು. ಸೆಟ್ ಕೆಲ್ಸ ಕೂಡಾ ಶೇ 70ರಷ್ಟು ಮುಗಿದಿತ್ತು. ಇನ್ನೇನೂ ಚಿತ್ರೀಕರಣ ಶುರುಮಾಡ್ಬೇಕೆನ್ನುವಷ್ಟರಲ್ಲಿ ಲಾಕ್ ಡೌನ್ ಮಾಡಲಾಯ್ತು.

ಹಾಗಾಗಿ ಸೆಟ್ ನಲ್ಲಿ ಗಿಡಗಳಿಗೆ ಬಿಸಿಲು ತಾಗಬಾರದೆನ್ನುವ ಉದ್ದೇಶದಿಂದ ಚಿತ್ರತಂಡ ನೆರಳಿನ ವ್ಯವಸ್ಥೆ ಮಾಡಿ ಬೆಂಗಳೂರಿಗೆ ಮರಳಿತ್ತು. ಇದೀಗ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರುವ ಹಿನ್ನಲೆಯಲ್ಲಿ ಮತ್ತೀಗ ಸೆಟ್ ವರ್ಕ್ ಕೆಲ್ಸಕ್ಕೆ ಚಾಲನೆ ನೀಡಲಾಗಿದೆ. ಬಾಕಿ ಇರುವ ಕೆಲ್ಸ ಭರದಿಂದ ಸಾಗಿದೆ. ಕೆ.ಜಿ.ಎಫ್ ಚಿತ್ರದ ಕಲಾ ನಿರ್ದೇಶಕ ಶಿವಕುಮಾರ್ ಅವರ ಉಸ್ತುವಾರಿಯಲ್ಲಿ ಹೈದ್ರಾಬಾದ್ ನ ಅನ್ನಪೂರ್ಣೆಶ್ವರಿ ಸ್ಟುಡಿಯೋದಲ್ಲಿ ಫಾರೆಸ್ಟ್ ಥೀಮ್ ನಲ್ಲಿ ಈ ಫ್ಯಾಂಟ್ಂ ಸೆಟ್ ಹಾಕಲಾಗ್ತಿದೆ ಅನ್ನೋದು ನಿಮ್ಮ ಗಮನಕ್ಕಿರಲಿ.

ಇನ್ನು, ಹೇಳಿ.. ಕೇಳಿ.. ಇದು ಕೊರೊನಾ ಕೇಡುಗಾಲ. ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ, ಮುಂಜಾಗೃತಾ ಕ್ರಮಗಳನ್ನೂ ತೆಗೆದುಕೊಂಡಿರುವ ಫ್ಯಾಂಟಮ್ ಚಿತ್ರತಂಡ ಸೆಟ್ ನಲ್ಲಿ ವೈದ್ಯಕೀಯ ತಂಡವನ್ನ ನಿಯೋಜನೆ ಮಾಡಿದೆ. ಸೆಟ್ ಗೆ ಸಿನಿಕಾರ್ಮಿಕರನ್ನ ಬಿಡುವ ಮುನ್ನ ಪ್ರತಿ ದಿನ ಪ್ರತಿಯೊಬ್ಬರನ್ನ ತಪಾಸಣೆ ಮಾಡಲಾಗ್ತಿದೆ. ನಿರ್ದಿಷ್ಟ ದಿನಗಳಲ್ಲಿ ಅಗತ್ಯವಿರುವ ಸಿಬ್ಬಂದಿಯನ್ನಷ್ಟೇ ಚಿತ್ರೀಕರಣದ ಪ್ಲೋರ್ ಗೆ ಕರೆಯುವ ಯೋಜನೆಯನ್ನ ಚಿತ್ರತಂಡ ಹಾಕಿಕೊಂಡಿದೆ. ಲೈಟ್ಸ್, ಮೇಕಪ್ ಹಾಗೂ ಇತರೆ ಜನ ಹಾಗೂ ಸಹಾಯಕರು ಕೆಲಸ ಪೂರೈಸಿದ ನಂತರ ಸೆಟ್ ನಿಂದ ಹಿಂತಿರುಗುವದಕ್ಕೂ ವ್ಯವಸ್ಥೆ ಮಾಡಲಾಗಿದೆ. ಸಿಂಪಲ್ಲಾಗಿ ಹೇಳಬೇಕಂದ್ರೆ ಸರ್ಕಾರದ ನೀತಿ ನಿಯಮಗಳನ್ನ ಗಮನದಲ್ಲಿಟ್ಟುಕೊಂಡೇ ಚಿತ್ರೀಕರಣದ ತಯಾರಿಗಳನ್ನ ಮಾಡಿಕೊಳ್ತಿದೆ ಚಿತ್ರತಂಡ.

ಫ್ಯಾಂಟಮ್ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನವಿರಲಿದೆ. ಚಿತ್ರದ ಮೇಲೀನ ನಿರೀಕ್ಷೆಗಳೂ ಗಗನದೆತ್ತರಕ್ಕೆ ಬೆಳೆಯಲು ಇದು ಒಂದು ಕಾರಣ. ಇನ್ನು, ಸುದೀಪ್ ಅತ್ಯಾಪ್ತ ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಒಟ್ನಲ್ಲಿ ಫ್ಯಾಂಟಮ್ ಅಖಾಡ ಮತ್ತೆ ರಂಗೇರಿದೆ. ಚಿತ್ರೀಕರಣ ಜುಲೈ ಒಂದರಿಂದ ಶುರುವಾಗಲಿದೆ. ಅಭಿಮಾನಿಗಳೂ ಸಂಭ್ರಮ ಪಡಲು ಸದ್ಯಕ್ಕೆ ಇದೊಂದೇ ಕಾರಣ ಸಾಕು. ಹಾಗಾಗಿಯೇ ಫ್ಯಾಂಟಮ್ ನ ಫಾರೆಸ್ಟ್ ಲೋಕ ಸೊಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

 

LEAVE A REPLY

Please enter your comment!
Please enter your name here