
ರಷ್ಯಾ ಹಾಗೂ ಉಕ್ರೇನ್ ನಡುವೆ ಶಾಂತಿ ನೆಲಸಲಿ: ವಾಟಾಳ್ ನಾಗರಾಜ್
ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವೆ ಶಾಂತಿ ನೆಲಸಲಿ ಎಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಘೋಷಣೆ ಕೂಗಿದ್ದಾರೆ. ಇದೇ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ರಷ್ಯಾ ದಾಳಿ ಸರಿಯಲ್ಲ, ವಿಶ್ವ ಸಂಸ್ಥೆ ಎಚ್ಚರ ವಹಿಸಬೇಕು. ಅಲ್ಲಿ ಸಾಕಷ್ಟು ನಮ್ಮ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ರಕ್ಷಣೆ ಮಾಡಬೇಕು. ಯಾವ ಕ್ಷಣದಲ್ಲಿ ಬಾಂಬ್ ಸ್ಪೋಟವಾಗುತ್ತದೋ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಂಡಿದ್ದಾರೆ. ಸರ್ಕಾರ ಹೆಚ್ಚಿನ ನಿಗಾ ವಹಿಸಿ ಕನ್ನಡಿಗರನ್ನು ಕಾಪಾಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.