ಉಕ್ರೇನ್ ತೊರೆದಿದ್ದಾರೆ 10 ಲಕ್ಷಕ್ಕೂ ಹೆಚ್ಚು ಜನ: ವಿಶ್ವಸಂಸ್ಥೆ ಮಾಹಿತಿ

ಅಂತರಾಷ್ಟ್ರೀಯ

ಉಕ್ರೇನ್ :ರಷ್ಯಾ ದಾಳಿಯ ನಂತರ ಸುಮಾರು 10 ಲಕ್ಷಕ್ಕೂ (1 ಮಿಲಿಯನ್) ಹೆಚ್ಚು ಜನ ಉಕ್ರೇನ್ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಯುಎನ್​ಹೆಚ್​ಸಿಆರ್ ಮಾಹಿತಿಯ ಪ್ರಕಾರ ಉಕ್ರೇನ್ ಜನಸಂಖ್ಯೆಯ 2 ಪ್ರತಿಶತದಷ್ಟು ಜನರು ವಾರದೊಳಗೆ ವಲಸೆ ಹೋಗಿದ್ದಾರೆ ಎಂದು ವರದಿಯಾಗಿದೆ. 2020ರ ಗಣತಿಯ ಅನ್ವಯ ಉಕ್ರೇನ್​ನಲ್ಲಿ 44 ಮಿಲಿಯನ್ (4.4 ಕೋಟಿ) ಜನಸಂಖ್ಯೆಯಿತ್ತು. ಇದು ತಂತ್ರಾತ್ಮಕವಾಗಿ ಉಕ್ರೇನ್​ಗೆ ಮುಖ್ಯವಾದ ನಗರವಾಗಿತ್ತು. ಇತ್ತ ಭಾರತ ಉಕ್ರೇನ್​ನಲ್ಲಿರುವ ತನ್ನ ನಾಗರಿಕರನ್ನು ಕರೆತರು ‘ಆಪರೇಷನ್ ಗಂಗಾ’ ಮೂಲಕ ನಿರಂತರ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಹಲವು ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಿದ್ದಾರೆ.

Leave a Reply

Your email address will not be published.