ಕಿಡ್ನಿ ಸಮಸ್ಯೆ ಇರುವವರು ಸೇವಿಸಬೇಕಾದ ಹಾಗೂ ಸೇವಿಸಬಾರದ ಆಹಾರಗಳು ಯಾವುವು ಗೊತ್ತಾ..?

ಲೈಫ್ ಸ್ಟೈಲ್

ದೇಹದಲ್ಲಿ ಪ್ರಮುಖ ಅಂಗವಾಗಿರುವಂತಹ ಕಿಡ್ನಿಯು ನಮ್ಮ ದೇಹದಲ್ಲಿರುವ ಕಲ್ಮಷಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುವಂತಹ ಕೆಲಸ ಮಾಡುವುದು. ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದರೆ ಆಗ ದೇಹದಲ್ಲಿ ಸಮಸ್ಯೆಗಳು ಆರಂಭವಾಗುವುದು. ಕಿಡ್ನಿ ಸಮಸ್ಯೆಗೆ ಇಂದಿನ ದಿನಗಳಲ್ಲಿ ಚಿಕಿತ್ಸೆಯು ಲಭ್ಯವಿದೆ. ಕಿಡ್ನಿಯು ದೀರ್ಘ ವೈಫಲ್ಯಕ್ಕೆ ಒಳಗಾಗುವುದು. ಇದರಲ್ಲಿ ಕಿಡ್ನಿ ಕಸಿ ಅಥವಾ ಡಯಾಲಿಸಿಸ್ ಮಾಡಬೇಕಾಗುತ್ತದೆ. ಅದಾಗ್ಯೂ, ಪರಿಸ್ಥಿತಿಯನ್ನು ಸ್ಥಿರ ಹಾಗೂ ಆರೋಗ್ಯವಾಗಿ ಇರಬೇಕಾದರೆ ದೀರ್ಘಕಾಲದ ತನಕ ಪೋಷಕಾಂಶಗಳನ್ನು ಪಡೆದುಕೊಂಡು, ಆರೋಗ್ಯಕರವಾಗಿರುವಂತಹ ಆಹಾರ ಸೇವನೆ ಮಾಡಬೇಕು.

ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ವೇಳೆ ದೇಹದಲ್ಲಿ ಕಲ್ಮಶವು ಶೇಖರಣೆ ಆಗುವುದು. ಇದರೊಂದಿಗೆ ರಕ್ತದಲ್ಲಿ ಕೆಲವೊಂ ದು ಪೋಷಕಾಂಶಗಳು ಹಾಗೂ ಖನಿಜಾಂಶಗಳು ಕಡಿಮೆ ಆಗುವ ಕಾರಣದಿಂದಾಗಿ ವಿಷಕಾರಿ ಅಂಶಗಳು ಹೆಚ್ಚಾಗುವುದು. ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವಂತಹ ವ್ಯಕ್ತಿಗಳು ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಇದರಲ್ಲಿ ಮುಖ್ಯವಾಗಿ ಅಧಿಕ ಸೋ ಡಿಯಂ, ಪೊಟಾಶಿಯಂ ಮತ್ತು ಪೋಸ್ಪರಸ್ ಇರುವಂತಹ ಆಹಾರಗಳನ್ನು ಕಡಿಮೆ ಮಾಡಿಕೊಳ್ಳಬೇಕು.

ಕಿಡ್ನಿ ವೈಫಲ್ಯದೊಂದಿಗೆ ಈ ಮೈಕ್ರೋನ್ಯೂಟ್ರಿಯಂಟ್ಸ್ ಗಳು ರಕ್ತದಲ್ಲಿ ಹೆಚ್ಚಾಗಿದ್ದರೆ ಆಗ ನಿಮಗೆ ಕೆಲವು ಇತರ ಸಮಸ್ಯೆಗಳು ಕಾಡಲು ಆರಂಭವಾಗುವುದು. ಇದರಲ್ಲಿ ಮುಖವಾಗಿ ನೀವು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸಬಹುದು. ಇದರಿಂದ ಹೃದಯದ ಸಮಸ್ಯೆಗಳು ಕಾಣಿಸಬಹುದು. ದೇಹದಲ್ಲಿ ದ್ರವ ಶೇಖರಣೆ ಆಗಬಹುದು. ಅನಿಯಮಿತವಾಗಿ ಎದೆ ಬಡಿತವು ಹೆಚ್ಚಾಗಬಹುದು, ಮೂಳೆ ಸಮಸ್ಯೆ ಕಾಣಿಸಿಕೊಳ್ಳಬಹುದು.

ಆರೋಗ್ಯಕಾರಿ ಆಹಾರ ಸೇವನೆ

ಆರೋಗ್ಯಕಾರಿ ಆಹಾರ ಸೇವನೆ ಮಾಡಿದರೆ ಆಗ ಕಿಡ್ನಿ ಸಮಸ್ಯೆ ಇರುವಂತಹ ಜನರಲ್ಲಿ ಪ್ರಾಣಹಾನಿ ಸಂಭವಿಸುವುದು ಕಡಿಮೆ ಎಂದು ಕ್ಲಿನಿಕಲ್ ಜರ್ನಲ್ ಆಫ್ ದ ಅಮೆರಿಕನ್ ಸೊಸೈಟಿ ಆಫ್ ನ್ಯೂರೋಲಾಜಿಯು ತನ್ನ ಸಂಶೋಧನೆಯಲ್ಲಿ ಹೇಳಿದೆ. ಆರೋಗ್ಯಕಾರಿ ಆಹಾರ ಕ್ರಮವೆಂದರೆ ಆಹಾರದಲ್ಲಿ ಹಣ್ಣುಗಳು, ಹಸಿರೆಲೆ ತರಕಾರಿಗಳು, ಮೀನು, ಧಾನ್ಯಗಳು, ಇಡೀ ಧಾನ್ಯಗಳು ಮತ್ತು ನಾರಿನಾಂಶ ಅಧಿಕವಾಗಿರುವ ಆಹಾರ ಸೇವನೆ ಮಾಡುವುದು. ಕಿಡ್ನಿ ಸಮಸ್ಯೆ ಇರುವಂತಹ ರೋಗಿಗಳು ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು. ಇದರಲ್ಲಿ ಮುಖ್ಯವಾಗಿ ಕೆಂಪು ಮಾಂಸ, ಸೋಡಿಯಂ ಮತ್ತು ಸಂಸ್ಕರಿತ ಸಕ್ಕರೆ ಸೇವನೆ ಪ್ರಮಾಣ ಕಡಿಮೆ ಮಾಡಬೇಕು.

ಕಿಡ್ನಿ ಸಮಸ್ಯೆ ಇರುವವರು ತಿನ್ನಲೇಬೇಕಾದ ಆಹಾರಗಳು

ಕಿಡ್ನಿ ಸ್ನೇಹಿಯಾಗಿರುವ ಕೆಲವೊಂದು ಆಹಾರಗಳ ಪ್ರಮುಖವಾಗಿ ರೋಗಿಯು ಸಲಹೆಗಳನ್ನು ಪಡೆಯಬೇಕು ಮತ್ತು ನಿರ್ಬಂಧಗಳನ್ನು ಹೇರಬೇಕು. ನೀವು ಖರೀದಿ ಮಾಡುವಂತಹ ಆಹಾರ ಸಾಮಗ್ರಿಗಳಿಂದಾಗಿ ಅಡುಗೆ ಮನೆಯನ್ನು ತುಂಬಿಸಿಕೊಳ್ಳಬೇಕು. ಸರಿಯಾದ ಆಹಾರ ಪದಾರ್ಥಗಳು ಇದ್ದರೆ ಅದು ತುಂಬಾ ಸಹಕಾರಿಯಾಗಲಿದೆ. ಕಿಡ್ನಿ ಕಾಯಿಲೆ ಇರುವಂತಹ ಜನರು ಯಾವ ರೀತಿಯ ಆಹಾರ ಸೇವನೆ ಮಾಡಬಹುದು ಎಂದು ಇಲ್ಲಿ ತಿಳಿಸಿಕೊಡಲಿದ್ದೇವೆ.

ಹಸಿರೆಲೆ ತರಕಾರಿಗಳು

ನಿಮ್ಮ ಪ್ರತಿನಿತ್ಯದ ಆಹಾರ ಕ್ರಮದಲ್ಲಿ ವಿವಿಧ ರೀತಿಯ ತರಕಾರಿಗಳು(ಹಸಿ ಅಥವಾ ಬೇಯಿಸಿದ) ಇರಲೇಬೇಕು. ಬಸಳೆ, ಬೀಟ್ ರೂಟ್, ಟೊಮೆಟೊ ಮತ್ತು ಸೆಲರಿ ತುಂಬಾ ಒಳ್ಳೆಯ ಆಯ್ಕೆಯಾಗಿದೆ. ಬೀಟ್ ರೂಟ್ ನಲ್ಲಿ ಉನ್ನತ ಮಟ್ಟದ ನೈಟ್ರಿಕ್ ಆಕ್ಸೈಡ್ ಇದ್ದು, ನೈಸರ್ಗಿಕವಾಗಿ ಇದು ರಕ್ತವನ್ನು ಶುದ್ಧೀಕರಿಸುವುದು. ನೈಟ್ರಿಕ್ ಆಕ್ಸೈಡ್ ನ ಮಟ್ಟವು ರಕ್ತದಲ್ಲಿ ಕಡಿಮೆ ಆದರೆ ಆಗ ಕಿಡ್ನಿಗೆ ಹಾನಿಯಾಗುವುದು ಎಂದು ಇಂಡಿಯನ್ ಜರ್ನಲ್ ಆಫ್ ನೆಫ್ರಾಲಜಿಯಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯಲ್ಲಿ ಹೇಳಿದೆ.

ಬಸಳೆಯು ನಿಮ್ಮ ಆಹಾರದಲ್ಲಿ ಅತ್ಯುತ್ತಮ ಆಯ್ಕೆಯಾಗಿದ್ದು, ಇದರಲ್ಲಿ ಇರುವಂತಹ ಉನ್ನತ ಮಟ್ಟದ ವಿಟಮಿನ್ ಬಿ ಮತ್ತು ಇತರ ಆಯಂಟಿಆಕ್ಸಿಡೆಂಟ್ ಗಳು ಕಿಡ್ನಿಯನ್ನು ನಿರ್ವಿಷಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಾಗ್ಯೂ, ಬಸಳೆಯಲ್ಲಿ ಇರುವಂತಹ ಪೋಷಕಾಂಶಗಳನ್ನು ನೀವು ಅತಿಯಾಗಿ ಸೇವನೆ ಮಾಡಬೇಡಿ. ಯಾಕೆಂದರೆ ಇದರಿಂದ ಕಿಡ್ನಿ ಕಲ್ಲುಗಳು ಉಂಟಾಗುವ ಸಾಧ್ಯತೆ ಇದೆ.

Leave a Reply

Your email address will not be published.