ಪೆಟ್ರೋಲ್ ಬಾಟಲ್ ದಾಳಿ ಭಯೋತ್ಪಾದನಾ ಕೃತ್ಯ: ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಬೆಂಗಳೂರು

ಬೆಂಗಳೂರು; ಪೊಲೀಸ್‌ ಸಿಬ್ಬಂದಿ ಮತ್ತು ಪೊಲೀಸ್‌ ಠಾಣೆಗಳ ಮೇಲೆ ಪೆಟ್ರೋಲ್‌ ತುಂಬಿದ ಬಾಟಲ್ ಬಳಸಿ ದಾಳಿ ನಡೆಸಿರುವುದು ಭಯೋತ್ಪಾದನಾ ಕೃತ್ಯ ಎಂದು ಹೈಕೋರ್ಟ್ ಹೇಳಿದೆ. ಹಾಗೆ ಹೇಳುವ ಮೂಲಕ ಎರಡು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಯ ಜಾಮೀನು ತಿರಸ್ಕರಿಸಿದೆ ಅಲ್ಲದೆ, ”ಪೊಲೀಸ್‌ ಠಾಣೆಯ ಮುಂದೆ ಉದ್ರಿಕ್ತ ಜನರು ಗುಂಪು ಗೂಡಿರುವುದು ಮತ್ತು ಪೊಲೀಸ್‌ ಠಾಣೆ ಹಾಗೂ ಸಿಬ್ಬಂದಿಯ ಮೇಲೆ ರಾಡ್‌,

ಪೆಟ್ರೋಲ್‌ ತುಂಬಿದ ಬಾಟಲ್‌ಗಳು ಮತ್ತಿತರರ ಮಾರಕಾಸ್ತ್ರಗಳಿಂದ ದಾಳಿ ನಡೆಸುವುದು ಹಾಗೂ ಗಲಭೆ ಉಂಟು ಮಾಡುವುದೆಲ್ಲವೂ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಾಡಿದ ಭಯೋತ್ಪಾದನಾ ಕೃತ್ಯಗಳೆನಿಸುತ್ತವೆ ”ಎಂದು ಹೇಳಿದೆ. ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಪೊಲೀಸ್‌ ಠಾಣೆಗಳ ಮೇಲೆ ದಾಳಿ ನಡೆಸಿದ ಆರೋಪ ಸಂಬಂಧ ಎನ್‌ಐಎ ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ ಅತೀಕ್‌ ಅಹಮದ್‌ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾ.ಕೆ.ಸೋಮಶೇಖರ್‌ ಮತ್ತು ನ್ಯಾ.ಶಿವಶಂಕರ್‌ ಅಮರಣ್ಣವರ್‌ ಅವರಿದ್ದ ವಿಭಾಗೀಯಪೀಠ ಈ ಆದೇಶವನ್ನು ನೀಡಿದೆ.

Leave a Reply

Your email address will not be published.