Home Crime PG ಯಲ್ಲಿರೋ ಯುವತಿಯರ ಅಂಗಾಂಗ ಮುಟ್ಟಿ ಕಾಮುಕನಿಂದ ಕಿರುಕುಳ..?! ರೂಂನಲ್ಲಿ ಮಲಗಿದ್ದ ಯುವತಿಯ ಅಪ್ಪಿಕೊಂಡು ದೌರ್ಜನ್ಯ…

PG ಯಲ್ಲಿರೋ ಯುವತಿಯರ ಅಂಗಾಂಗ ಮುಟ್ಟಿ ಕಾಮುಕನಿಂದ ಕಿರುಕುಳ..?! ರೂಂನಲ್ಲಿ ಮಲಗಿದ್ದ ಯುವತಿಯ ಅಪ್ಪಿಕೊಂಡು ದೌರ್ಜನ್ಯ…

827
0
SHARE

ಸಿಲಿಕಾನ್ ಸಿಟಿಯ ಪಿಜಿಯಲ್ಲಿರೋ ಹುಡುಗಿಯರೇ ಎಚ್ಚರ.ತಡರಾತ್ರಿ ನೀವು ಇರೋ ಪಿಜಿಗೆ ನುಗ್ಗುತ್ತಿದ್ದಾನೆ ನೈಟ್ ಕಾಮುಕ.ಸಿಸಿಟಿವಿ ಇಲ್ದೆ ಇರೋ ಪಿಜಿಗಳೇ ಈ ಕಾಮುಕನ ಟಾರ್ಗೆಟ್..
ಪಿಜಿಗೆ ಬಂದು ಹುಡುಗಿಯರ ಜೊತೆ ಮಲಗಿ ಕ್ಷಣಾರ್ದದಲ್ಲೇ ಎಸ್ಕೇಪ್ .ಪಿಜಿಯಲ್ಲಿರೋ ಯುವತಿಯರ ಅಂಗಾಂಗ ಮುಟ್ಟಿ ಕಾಮುಕನಿಂದ ಕಿರುಕುಳ.

ಅಕ್ಟೋಬರ್ 2ರಂದು ಮಧ್ಯರಾತ್ರಿ ನಡೆದಿದ್ದ ಘಟನೆ.ಶಾಂತಿನಗರದ ಬಿಟಿಎಸ್ ರೋಡ್ ನಲ್ಲಿರೋ ಪಿಜಿಗೆ ನುಗ್ಗಿದ್ದ ಕಾಮುಕ.ರೂಂನಲ್ಲಿ ಮಲಗಿದ್ದ ಯುವತಿಯ ಅಪ್ಪಿಕೊಂಡು ದೌರ್ಜನ್ಯ.ವಿಲ್ಸನ್ ಗಾರ್ಡನ್ ಪೊಲೀಸರಿಗೆ ಮಾಹಿತಿ ನೀಡಿರೋ ಯುವತಿಯರುಸಿಲಿಕಾನ್ ಸಿಟಿಯಲ್ಲಿ ಕಾಮುಕರು ಎಲ್ಲಿ ಹೇಗೆ ನುಗ್ಗಿ ಬರ್ತಾರೆ ಅನ್ನೋದೆ ಗೊತ್ತಿಲ್ಲ..

ಕೆಲ ಸೈಕೋ ಕಾಮುಕರು ಕಾಲೇಜ್ ಹಾಸ್ಟೆಲ್ ಗಳಿಗೆ ನುಗ್ಗಿ ಹುಡುಗಿರ ಬಟ್ಟೆ ವಾಸನೆ ನೋಡುತ್ತಿದ್ರೆ, ಇತ್ತ ನಾನೇನು ಕಮ್ಮಿ ಅಂತಾ ಕಾಮುಕನೊಬ್ಬ ಶಾಂತಿನಗರದ ಬಿಡಿಎಸ್ ರೋಡನಲ್ಲಿರೋ ಲೇಡಿಸ್ ಪಿಜೆಗೆ ನುಗ್ಗಿ ಹುಡುಗಿಯರ ಪಕ್ಕದಲ್ಲೇ ಮಲಗಿದ್ದಾನೆ..ಇದೇ ತಿಂಗಳು ಅಕ್ಟೋಬರ್ 2 ರಂದು ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಪಿಜೆಗೆ ನುಗ್ಗಿರೋ ಕಾಮುಕ, ಯುವತಿಯರ ಪಕ್ಕದಲ್ಲೇ ಮಲಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ..

ಇದೇ ವೇಳೆ ರೂಮಿಗೆ ನುಗ್ಗಿದ ಕಾಮುಕ ಮಲಗಿದ್ದ ಯುವತಿಯರನ್ನು ಅಪ್ಪಿಕೊಂಡು ದೌರ್ಜನ್ಯ ಎಸಗಿದ್ದಾನೆ.. ಇದರಿಂದ ಆತಂಕಗೊಂಡು ಯುವತಿಯರು ಚೀರಿಕೊಂಡಾಗ ಕಾಮುಕ ಸ್ಥಳದಿಂದ ಹೋಡಿ ಹೋಗಿದ್ದಾನೆ.ಬಳಿಕ ಆತಂಕಗೊಂಡ ಯುವತಿಯರು ವಿಲ್ಸನ್ ಗಾರ್ಡನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ..

ಇತ್ತ ಲೇಡಿಸ್ ಪಿಜಿಯಾದ್ರು ಸಹ ಪಿಜಿ ಮಾಲೀಕ ಸಿಸಿಟಿವಿಯನ್ನು ಸಹ ಹಾಕಿಲ್ಲ ಹೀಗಾಗಿ ಇದನ್ನೇ ಬಂಡವಾಳವಾಗಿಸಿಕೊಂಡು ಕಾಮುಕ ಟಾರ್ಗೆಟ್ ಮಾಡಿ ಪಿಜಿಗೆ ನುಗ್ಗಿದ್ದಾನೆ ಎನ್ನಲಾಗುತ್ತಿದೆ.. ಸಧ್ಯ ದೂರು ದಾಖಲಿಸಿಕೊಂಡಿರೋ ವಿಲ್ಸನ್ ಗಾರ್ಡನ್ ಪೊಲೀಸರು ತನಿಖೆ ಮುಂದುವರಿದ್ದಾರೆ..

LEAVE A REPLY

Please enter your comment!
Please enter your name here