ಫೇಸ್ ಬುಕ್ ನಲ್ಲಿ ಮಹಿಳೆಯ ಫೋಟೋ, ಮೊಬೈಲ್ ನಂಬರ್ ಹಾಕಿ ಕಿರುಕುಳ: ಆರೋಪಿ ಬಂಧನ

ಅಪರಾಧ

ಬೆಂಗಳೂರು: ಫೇಸ್​ಬುಕ್​​ನಲ್ಲಿ ಮಹಿಳೆಯ ಫೋಟೋ ಹಾಕಿ ಕಿರುಕುಳ ನೀಡುತ್ತಿದ್ದ ಚಂದ್ರಶೇಖರ ಅಲಿಯಾಸ್​ ಡಾರ್ಲಿಂಗ್ ಚಂದು, ಎಂಬಾತನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಫೋಟೋ ಜೊತೆ ಮಹಿಳೆ ಕಾಂಟ್ಯಾಕ್ಟ್ ನಂಬರ್ ಪೋಸ್ಟ್ ಮಾಡಿದ್ದ ಆರೋಪಿ ಚಂದ್ರಶೇಖರ ಎಂಬಾತನನ್ನು ಬಂಧಿಸಲಾಗಿದೆ. ಮಹಿಳೆಯ ದೂರು ಆಧರಿಸಿ ಬಾಗಲಗುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚಂದು ಕಿರುಕುಳಕ್ಕೆ ಬೇಸತ್ತು ಮಹಿಳೆ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗು ತ್ತಿದ್ದಂತೆ ಅರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Leave a Reply

Your email address will not be published.