Home Cinema PM ಮೋದಿ ಕಾರಿಗಿಲ್ಲದ ಕೂಲಿಂಗ್ ಪೇಪರ್ ಯಶ್ ಕಾರಿಗ್ಯಾಕೆ..? ನೋಡಿ ನೋಡದಂತೆ ಸುಮ್ಮನ್ನಿದ್ದಾರಾ RTO ಅಧಿಕಾರಿಗಳು..!?

PM ಮೋದಿ ಕಾರಿಗಿಲ್ಲದ ಕೂಲಿಂಗ್ ಪೇಪರ್ ಯಶ್ ಕಾರಿಗ್ಯಾಕೆ..? ನೋಡಿ ನೋಡದಂತೆ ಸುಮ್ಮನ್ನಿದ್ದಾರಾ RTO ಅಧಿಕಾರಿಗಳು..!?

957
0
SHARE

ರಾಕಿಂಗ್ ಸ್ಟಾರ್ ಯಶ್ ಗೆ ಯಾಕೋ ವಿವಾದಗಳು ಬಿಡುವಂತೆ ಕಾಣ್ತೀಲ್ಲ.. ಚೀಟಿ ವ್ಯವಹಾರ, ಮನೆ ಬಾಡಿಗೆ ಗಲಾಟೆ, ಐಟಿ ರೇಡ್ ಸೇರಿದಂತೆ ಹಲವು ಕಾಂಟ್ರವರ್ಸಿ ಗಳಿಗೆ ಗುರಿಯಾಗುತ್ತಿದ್ದಾರೆ.. ಇದೀಗ ಸಾರಿಗೆ ಇಲಾಖೆಯ ನಿಯಮ ಉಲ್ಲಂಘನೆ ಮಾಡೋ ಮೂಲಕ ಯಶ್ ಮತ್ತೆ ಸುದ್ದಿಯಾಗಿದ್ದಾರೆ.. ನಟ ಯಶ್ ತಮ್ಮ ಬೆಂಜ್ ಕಾರಿಗೆ ಟಿಂಟೆಡ್ ಗ್ಲಾಸ್ ಹಾಕೋ ಮೂಲಕ ನಟರಿಗೊಂದು ರೂಲ್ಸ್, ಸಾಮಾನ್ಯರಿಗೆ ಒಂದು ಕಾನೂನು ಇದೆ ಅನ್ನೋದನ್ನ ಸಾಬೀತು ಮಾಡಿದ್ದಾರೆ..

ಯೆಸ್, ನಮ್ಮ ರಾಜ್ಯದಲ್ಲಿ ಜನಸಾಮಾನ್ಯರಿಗೆ ಒಂದು ರೂಲ್ಸ್, ಸೆಲೆಬ್ರಿಟಿಗಳಿಗೆ ಒಂದು ರೂಲ್ಸ್ ಇದೆ ಅನ್ನೋದಕ್ಕೆ ಬೆಸ್ಟ್ ಎಕ್ಸಂಪಾಲ್ ಅಂದ್ರೆ ಅದು ರಾಕಿ ಬಾಯ್, ಯಾಕಂದ್ರೆ ಯಶ್ ಬಳಸುವ ಐಶಾರಾಮಿ ಕಾರಿಗೆ ಟಿಂಟೆಡ್ ಗ್ಲಾಸ್ ಅಳವಡಿಕೆ ಮಾಡಲಾಗಿದೆ. ಯಾರು ಟಿಂಟೆಡ್ ಗ್ಲಾಸ್ ಹಾಕಿಸಬಾರದು ಅಂತಾ ಸ್ವತಃ ಸುಪ್ರೀಂ ಕೋರ್ಟ್ ಆದೇಶಿಸಿ ವರ್ಷಗಳೇ ಕಳೆದೀವೆ.. ಆದ್ರೂ ಕೂಡ ಯಶ್ ತಮ್ಮ ಕಾರಿಗೆ ಟಿಂಟೆಡ್ ಗ್ಲಾಸ್ ಹಾಕಿಸಿಕೊಂಡಿದ್ದಾರೆ.ಪ್ರಧಾನಿ , ಸಿಎಂ ಕಾರಿಗೆ ಟಿಂಟೆಡ್ ಗ್ಲಾಸ್ ಬಳಸೋದಿಲ್ಲ.

ಅಂತದರಲ್ಲಿ ಯಶ್ ಟಿಂಟೆಡ್ ಗ್ಲಾಸ್ ಬಳಸುವುದು ಎಷ್ಟರಮಟ್ಟಿಗೆ ಸರಿ? ಇನ್ನು ವಾಹನ ಸವಾರ ಹೆಲ್ಮೆಟ್ ಹಾಕಿದ್ರೂ ನಿಲ್ಲಿಸಿ, ಲೈಸೆನ್ಸ್ ಚೆಕ್ ಮಾಡಿ ದಂಡ ಹಾಕೋ ಟ್ರಾಫಿಕ್ ಪೊಲೀಸರು ಯಶ್ ಕಾರನ್ನ ನೋಡಿ ಕಂಡೂ ಕಾಣದಂತೆ ಇರೋದು ಅನುಮಾನಕ್ಕೆ ಕಾರಣವಾಗಿದೆ.ಯಶ್ ಇವತ್ತು KA 05 MY 8055 ನಂಬರ್ ನ ಬೆಂಜ್ ಕಾರಿನಲ್ಲಿ ಐಟಿ ಇಲಾಖೆಗೆ ಆಗಮಿಸಿದ್ರು. ಈ ವೇಳೆ ಯಶ್ ಬೆಂಜ್ ಕಾರಿನ ಗ್ಲಾಸ್ ಮೇಲೆ ಸುಮಾರು 11 ಎಂಎಂ ಗಾತ್ರದ ಟಿಂಟೆಡ್ ಗ್ಲಾಸ್ ಹಾಕಿರೋದು ಕಾಣಿಸುತ್ತೆ.

ಆರ್ ಟಿಒ ರೂಲ್ಸ್ ಪ್ರಕಾರ ಕಾರಿನ ಗ್ಲಾಸ್ ಗಳಿಗೆ ಮಿನಿಮಮ್ 1.5 ವೆರೆಗೂ ಟಿಂಟೆಡ್ ಗ್ಲಾಸ್ ಹಾಕೋಕೆ ಅವಕಾಶ ವಿದೆ.. ಆದ್ರೆ ನಟ ಯಶ್ ಈ ರೂಲ್ಸ್ ಗೆಲ್ಲಾ ಗುಡ್ ಬೈ ಹೇಳಿದ್ದಾರೆ. ಸ್ಟಾರ್ ಆಗಿರೋ ನನ್ನ ಕಾರನ್ನ ತಡೆಯೋ ತಾಕತ್ತು ಯಾರಿಗಿದೆ ಅನ್ಕೊಂಡಿದ್ದಾರೆ.. ಈ ಬಗ್ಗೆ ಸಾರಿಗೆ ಆಯುಕ್ತ ವಿ.ಪಿ.ಇಕ್ಕೇರಿ ಅವರನ್ನ ಕೇಳಿದ್ರೆ, ನಟ ಇರ್ಲಿ, ಯಾರೇ ಇರ್ಲಿ, ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೇಳುತ್ತೇನೆ ಎಂದಿದ್ದಾರೆ.

ಟ್ರಾಫಿಕ್ ಪೊಲೀಸರು ರೋಡ್ ಮೂಲೆ ಮೂಲೆಯಲ್ಲೂ ಬಚ್ಚಿಟ್ಕೊಂಡು ವಾಹನಗಳನ್ನ ಹಿಡಿಡು ಫೈನ್ ಹಾಕ್ತಾರೆ. ಆದೇ ಸ್ಟಾರ್ ನಟನ ಕಾರು ಅಂದ್ರೆ ಯಾವೊಬ್ಬ ಪೊಲೀಸ್ ಅಧಿಕಾರಿಯೂ ಕಾರು ತಡೆಯೋ ಗೋಜಿಗೆ ಹೋಗಿಲ್ಲ.. ಇವತ್ತು ಇದೇ ಕಾರಿನಲ್ಲಿ ಐಟಿ ಇಲಾಖೆಗೆ ಬಂದಿದ್ರೂ ಟ್ರಾಫಿಕ್ ಪೊಲೀಸರು ಮಾತ್ರ ನಮಗೆ ಸಂಬಂಧವೇ ಇಲ್ಲ ಅನ್ನೋ ರೀತಿ ಇರೋದು ಗುಬ್ಬಿ ಮೇಲಿನ ಬ್ರಹ್ಮಾಸ್ತ್ರ ಮಾತು ನೆನಪಿಸುತ್ತದೆ.

LEAVE A REPLY

Please enter your comment!
Please enter your name here