PM Modi Raksha Bandhan.. ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಟ್ಟಿದ ಮಕ್ಕಳು

ರಾಷ್ಟ್ರೀಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿವಾಸದಲ್ಲಿ ರಕ್ಷಬಂಧನವನ್ನು ಆಚರಿಸಿದ್ದು, ಈ ಸಂದರ್ಭದಲ್ಲಿ ತಮ್ಮ ನಿವಾಸದ ಸಿಬ್ಬಂದಿಯ ಹೆಣ್ಣುಮಕ್ಕಳು ಮೋದಿಗೆ ರಾಖಿ ಕಟ್ಟಿದರು. ಪ್ರಧಾನಿ ಅವರ ಮನೆಯಲ್ಲಿ ನಡೆದ ಈ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಕಚೇರಿಯಲ್ಲಿ (PMO) ಕೆಲಸ ಮಾಡುವ ಕಸ ಗುಡಿಸುವ, ತೋಟಗಾರರು,

 

ಚಾಲಕರು ಸೇರಿದಂತೆ ಇನ್ನಿತರೆ ಕೆಲಸ ಮಾಡುವ ಸಿಬ್ಬಂದಿಯ ಹೆಣ್ಣು ಮಕ್ಕಳು  ಭಾಗವಹಿಸಿ ರಾಖಿ ಕಟ್ಟಿದ್ದರು.ಈ ವೀಡಿಯೋವನ್ನು ಅಲ್ಲಿನ ಅಧಿಕಾರಿಗಳು ಹಂಚಿಕೊಂಡಿದ್ದು, ವೀಡಿಯೋದಲ್ಲಿ ಪ್ರಧಾನಿ ಮೋದಿ ಅವರು ಆ ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ. ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಾ ಬಂಧನದ ನಿಮಿತ್ತ ಎಲ್ಲರಿಗೂ ಶುಭಾಶಯವನ್ನು ಕೋರಿ ಟ್ವೀಟ್ ಮಾಡಿದ್ದರು.

Leave a Reply

Your email address will not be published.