100 ಕಿಸಾನ್ ಡ್ರೋನ್ ಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ರಾಷ್ಟ್ರೀಯ

ನವದೆಹಲಿಬಜೆಟ್​ನಲ್ಲಿ ಘೋಷಿಸಿದಂತೆ ರಸಗೊಬ್ಬರ, ಕೀಟನಾಶಕ ಸಿಂಪಡಣೆ ಮತ್ತು ಮಾರುಕಟ್ಟೆಗೆ ಉತ್ಪನ್ನಗಳ ಸಾಗಣೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಕಿಸಾನ್​ ಡ್ರೋನ್​ಗಳ ಬಳಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು. ಮನೇ ಸರ್​ನಲ್ಲಿ ನಡೆದ ವರ್ಚುಯಲ್ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ವಿವಿಧ ಕ್ಷೇತ್ರಗಳಲ್ಲಿ ಡ್ರೋನ್​ಗಳ ಬಳಕೆಯ ಬಗ್ಗೆ ವಿವರಿಸಿ, ಬೀಟಿಂಗ್ ರಿಟ್ರೀಟ್ ವೇಳೆ (ಗಣರಾಜ್ಯೋತ್ಸವ ದಿನದಂದು) ಪ್ರದರ್ಶಿಸಲಾದ 1,000 ಡ್ರೋನ್‌ಗಳ ಉದಾಹರಣೆಗಳನ್ನು ಉಲ್ಲೇಖಿಸಿದರು.

ಸ್ವಾಮಿತ್ವ ಯೋಜನೆಯಡಿ ಭೂ ದಾಖಲೆಗಳ ಸಮೀಕ್ಷೆ ಮತ್ತು ಕಷ್ಟಕರವಾದ ಪ್ರದೇಶಗಳಿಗೆ ಔಷಧ, ಲಸಿಕೆ ಪೂರೈಸಲು ಡ್ರೋನ್​ ಸಹಾ ಯಕವಾಗುತ್ತದೆ. ಹೆಚ್ಚಿನ ಸಾಮರ್ಥ್ಯದ ಕಿಸಾನ್​ ಡ್ರೋನ್‌ಗಳು ರೈತರಿಗೆ ಲಭ್ಯವಾಗುವ ಮೂಲಕ ತಾಜಾ ತರಕಾರಿ, ಹಣ್ಣು ಮತ್ತು ಹೂವುಗಳನ್ನು ನೇರವಾಗಿ ಮಾರುಕಟ್ಟೆಗೆ ಕಳುಹಿಸಲು ಸಹಾಯ ಮಾಡುತ್ತವೆ. ಮೀನುಗಾರರು ನದಿ ಅಥವಾ ಸಮುದ್ರದಿಂದ ತಾಜಾ ಮೀನುಗಳನ್ನು ನೇರವಾಗಿ ಮಾರಾಟಕ್ಕೆ ಕಳುಹಿಸಬಹುದು ಎಂದು ಮೋದಿ ಹೇಳಿದರು.

ತಂತ್ರಜ್ಞಾನ ಬಳಕೆ ಹೆಚ್ಚಿನ ಅವಕಾಶಗಳನ್ನು ತೆರೆದಿಡುತ್ತದೆ. ದೇಶದ ಹಲವಾರು ಕಂಪನಿಗಳು ಈ ನಿಟ್ಟಿನಲ್ಲಿ ಸಾಗುತ್ತಿರುವುದು ಆಶಾ ದಾಯಕ ಬೆಳವಣಿಗೆಯಾಗಿದೆ. ಭಾರತವು ಡ್ರೋನ್​ ಸ್ಟಾರ್ಟ್​ಅಪ್​ಗೆ ತನ್ನನ್ನು ತೆರೆದುಕೊಂಡಿರುವುದು, ಮುಂದಿನ ದಿನಗಳಲ್ಲಿ ಇದರ ಪ್ರಭಾವ ಹೆಚ್ಚಲಿದೆ ಎಂದರು. ‘ಗರುಡ್ ಏರೋಸ್ಪೇಸ್’ ಮುಂದಿನ 2 ವರ್ಷಗಳಲ್ಲಿ ಮೇಕ್​ ಇನ್​ ಇಂಡಿಯಾದಡಿ 1 ಲಕ್ಷ ಡ್ರೋನ್​ಗಳನ್ನು ತಯಾರಿಸಲಿದೆ. ಇದರಿಂದ ಯುವಜನತೆಗೆ ಉದ್ಯೋಗಾವಕಾಶವೂ ದೊರಕಲಿದೆ ಎಂದು ಮೋದಿ ಹೇಳಿದರು.

Leave a Reply

Your email address will not be published.