ನಾಳೆ ಟ್ವಿಟರ್​ನಲ್ಲಿ ಲೈವ್ ಬರಲಿದ್ದಾರೆ ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು

ನಾನು ಈ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ಟ್ವಿಟರ್​ನಲ್ಲಿ ಲೈವ್ ಬರುತ್ತೇನೆ ಎಂದು #AskCPBlr ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸ್ವತಃ ಕಮಲ್​ ಪಂತ್​ ಅವರು ಟ್ವೀಟ್​ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ಕುಂದುಕೊರತೆಗಳನ್ನು, ಅಹವಾಲುಗಳನ್ನು, ಆಲೋಚನೆಗಳು ಮತ್ತು ಸಲಹೆಗಳನ್ನು ಪೊಲೀಸ್​ ಆಯಕ್ತರೊಂದಿಗೆ ಹಂಚಿಕೊಳ್ಳಲು ಟಿಟ್ವರ್​ ಅವಕಾಶ ಮಾಡಿಕೊಟ್ಟಿದೆ. ಇದನ್ನು ತಮ್ಮ ಟಿಟ್ವರ್​ ಖಾತೆಯಲ್ಲಿ ಸತಃ ಹಂಚಿಕೊಂಡಿರುವ ಬೆಂಗಳೂರು ನಗರ ಪೊಲೀಸ್​ ಆಯುಕ್ತರಾದ ಕಮಲ್​ ಪಂತ್, ಫೆಬ್ರವರಿ 19 ರಂದು ಭೇಟಿಯಾಗೋಣ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್​ ಮಾಡಿದ್ದಾರೆ.

Leave a Reply

Your email address will not be published.