ಕರ್ತವ್ಯ ಮರೆತ ಪೊಲೀಸರು; ಜನರ ಬೇಕಾಬಿಟ್ಟಿ ಓಡಾಟ

ಕರ್ತವ್ಯ ಮರೆತ ಪೊಲೀಸರು; ಜನರ ಬೇಕಾಬಿಟ್ಟಿ ಓಡಾಟ

668
0

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊರೊನಾ ನಿಯಂತ್ರಿಸಲು ಸರ್ಕಾರ ನಾನಾ ಸರ್ಕಸ್ ಮಾಡ್ತಿದ್ರೆ, ಬೆಡ್, ಆಕ್ಸಿಜನ್ ಸಿಗ್ತಿಲ್ಲ, ವೆಂಟಿಲೇಟರ್ ಇಲ್ಲದೇ ಪ್ರತಿದಿನ ನೂರಾರು ಕೊರೊನಾ ಸೋಂಕಿತರು ಮೃತಪಡುತ್ತಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ, ಆದ್ರೆ ಕೋಲಾರದಲ್ಲಿ ನಮ್ಗೂ ಇದಕ್ಕೂ ಸಂಬಂಧನೇ ಇಲ್ಲ, ಕೊರೊನಾ ಅನ್ನೋದೆ ಇಲ್ಲ ಅನ್ನೋ ತರ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ನಗರದಲ್ಲಿ ಜನ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಇನ್ನೂ ಕೋಲಾರ ನಗರದ ಅಮ್ಮವಾರಿಪೇಟೆ, ಕಾಳಮ್ಮ ಗುಡಿ ರಸ್ತೆ, ಎಂಜಿ ರಸ್ತೆಗಳಲ್ಲಿ ಜನ ಜಾತ್ರೆಯೇ ಸೇರಿತ್ತು. ಇನ್ನೂ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ, ಖರೀದಿ ಬರದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಮರೆತಿದ್ರು. ಅಲ್ಲದೇ ಕೋಲಾರ ನಗರದ ಪ್ರಮುಖ ರಸ್ತೆಯಾದ ಎಂಜಿ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆಯೇ ಟ್ರಾಫಿಕ್ ಜಾಮ್ ಆಗಿತ್ತು.

VIAಕರ್ತವ್ಯ ಮರೆತ ಪೊಲೀಸರು; ಜನರ ಬೇಕಾಬಿಟ್ಟಿ ಓಡಾಟ
SOURCEಕರ್ತವ್ಯ ಮರೆತ ಪೊಲೀಸರು; ಜನರ ಬೇಕಾಬಿಟ್ಟಿ ಓಡಾಟ
Previous articleಸಾವಿನ ಮನೆಯಾದ ಚಾಮರಾಜನಗರ; ಕಳೆದ 24 ಗಂಟೆಯಲ್ಲಿ 15 ಮಂದಿ ದುರ್ಮರಣ!
Next articleಲಸಿಕೆಯ ವಿಚಾರವಾಗಿ ಕಿಚ್ಚ ಸುದೀಪ್ ಹೇಳಿದ್ದೇನು?

LEAVE A REPLY

Please enter your comment!
Please enter your name here