ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ ಸ್ಫೋಟಕ ಸಾಮಗ್ರಿಗಳ ವಶ ಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಿರಿಕಾಟಿ ಗ್ರಾಮದ ಮಹೇಶ್(42) ಎಂಬ ಆರೋಪಿ ಬಂಧನನಾಗಿದ್ದು, ಈತ ತನ್ನ ಮನೆ ಸಮೀಪ ಸೌದೆಗಳ ನಡುವೆ ಮುಚ್ಚಿಟ್ಟಿದ್ದ ಸ್ಫೋಟಕ ವಶಕ್ಕೆ ಪಡೆದ ಪೊಲೀಸರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.