ನೊವಾಕ್ ಜೊಕೊವಿಕ್ ಕೋರೋನಾ ವ್ಯಾಕ್ಸಿನ್ ಪಡೆಯುವಂತೆ ಪೂನಾವಾಲ ಒತ್ತಾಯ

ಕ್ರೀಡೆ

ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಸಿಇಒ ಆದಾರ್ ಪೂನಾವಾಲ ಅವರು, ವಿಶ್ವದ ನಂಬರ್ ಒನ್ ಟೆನ್ನಿಸ್ ಆಟಗಾರ ಸರ್ಬಿಯಾದ ದಂತಕಥೆ ನೊವಾಕ್ ಜೊಕೊವಿಕ್ ಅವರಿಗೆ ಕೊರೊನಾ ಲಸಿಕೆ ಪಡೆಯುವಂತೆ ಗುರುವಾರ ಒತ್ತಾಯಿಸಿದ್ದಾರೆ. 20 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ ನೊವಾಕ್ ಜೊಕೊವಿಕ್ ಇನ್ನೂ ಕೋವಿಡ್ ಲಸಿಕೆ ಪಡೆದಿಲ್ಲ. ಬಲವಂತದಿಂದ ಲಸಿಕೆ ಪಡೆದುಕೊಳ್ಳುವುದಿಲ್ಲ, ಅದರ ಬದಲಿಗೆ ಭವಿಷ್ಯದ ಟ್ರೋಫಿಯನ್ನು ಕಳೆದುಕೊಳ್ಳಲು ಅವರು ಸಿದ್ಧರಿರುವುದಾಗಿ ಹೇಳುತ್ತಾ ಬಂದಿದ್ದಾರೆ.

ಟೆನ್ನಿಸ್ ಆಟವಾಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಪೂನಾವಾಲ. ಲಸಿಕೆ ಪಡೆಯದಿರುವ ನಿಮ್ಮ ವೈಯಕ್ತಿಕ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ ಮತ್ತು ನೀವು ಟೆನ್ನಿಸ್ ಆಡುವುದನ್ನು ಪ್ರೀತಿಸುತ್ತೇನೆ. ಆದರೆ, ನೀವು ಮನಸ್ಸು ಬದಲಾಯಿಸುವಿರಿ ಎಂಬ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳು 2022 ರ ಮೊದಲ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಪಂದ್ಯಾವಳಿಯಾದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಲಸಿಕೆ ಪಡೆಯದ ಕಾರಣ ಜೊಕೊವಿಕ್ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಕಾರಣ ಅವರು ಆಸ್ಟ್ರೇಲಿಯಾದ ಕೊರೊನಾ ಲಸಿಕೆ ನಿಯಮಗಳನ್ನು ಅನುಸರಿಸಿರಲಿಲ್ಲ. ಅಲ್ಲದೇ ಅವರನ್ನು ಆಸ್ಟ್ರೇಲಿಯಾ ಸರ್ಕಾರವು ಗಡಿಪಾರು ಮಾಡಿತ್ತು. ಈ ಸಂಬಂಧ ಅವರು ಕಾನೂನು ಹೋರಾಟ ಕೂಡಾ ಮಾಡಿದ್ದರು.ಅಷ್ಟೇ ಅಲ್ಲ ಲಸಿಕೆ ಪಡೆಯುವುದಿಲ್ಲ ಎಂಬ ತಮ್ಮ ನಿಲುವಿಗೆ ಅಂಟಿಕೊಂಡಿದ್ದರು. ಇದೇ ವೇಳೆ ತಾವು ಲಸಿಕೆ ವಿರೋಧಿಯೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.

 

 

 

Leave a Reply

Your email address will not be published.