ಬಡ ವ್ಯಾಪಾರಿ ಮೇಲೆ ಫುಡ್ ಆಫೀಸರ್ಸ್ ದೌರ್ಜನ್ಯ: ನೋಟಿಸ್ ಇಲ್ಲದೇ ಅಂಗಡಿ ಮೇಲೆ ಏಕಾಏಕಿ ದಾಳಿ

ಬೆಂಗಳೂರು

ಬೆಂಗಳೂರು: ಬಡ ವ್ಯಾಪಾರಿ ಮೇಲೆ ಫುಡ್​ ಆಫೀಸರ್ಸ್​ ದೌರ್ಜನ್ಯ ವೆಸಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಗಿರಿನಗರದ ಹೊಸಕೆರೆಹಳ್ಳಿಯಲ್ಲಿ ಘಟನೆ ನಡೆದಿದೆ. ರೋಡ್ ಸೈಡ್ ಮೀನು ವ್ಯಾಪಾರ ಮಾಡ್ತಿದ್ದ ಯುವಕನ ಮೇಲೆ ರಾತ್ರಿ 9.20ರ ಸುಮಾರಿಗೆ ಯಾವುದೇ ನೋಟಿಸ್​ ಇಲ್ಲದೇ ದಾಳಿ ನಡೆಸಲಾಗಿದೆ.

ವ್ಯಾಪಾರಿ ಹರಿ ಕಾಲಿಗೆ ಬಿದ್ರೂ  ಅಧಿಕಾರಿಗಳು ತಳ್ಳೋ ಗಾಡಿ ಎತ್ತೆಸೆದಿದ್ದಾರೆ. ಅಧಿಕಾರಿಗಳು ವ್ಯಾಪಾರಕ್ಕೆ ತಂದಿದ್ದ ಆಹಾರ ಮಣ್ಣು ಪಾಲು ಮಾಡಿದ್ದಾರೆ.  ಟ್ರಾಕ್ಟರ್ ತಂದು ತಳ್ಳೋ ಗಾಡಿ, ವಸ್ತು ತುಂಬಿಕೊಂಡಿದ್ದಾರೆ.  ಬೀದಿ ಬದಿ ವ್ಯಾಪಾರಿ ಹರಿ 2 ಸಾವಿರ ಬಂಡವಾಳ ಹೂಡಿದ್ದರು

ಜನರು ಸೇರಿ ತರಾಟೆಗೆ ತಗೆದುಕೊಳ್ತಿದ್ದಂತೆ ಅಧಿಕಾರಿಗಳು ಎಸ್ಕೇಪ್ ಆಗಿದ್ದು, ​​​ಅದೇ ಜಾಗದಲ್ಲಿ ಹತ್ತಾರು ಅಂಗಡಿ ಇದ್ರೂ ಹರಿ ಮೇಲೆ ದೌರ್ಜನ್ಯ ಎಸಗಲಾಗಿದೆ. ಮಂತ್ಲಿ ಕೊಡ್ತಿಲ್ಲಾ ಅಂತಾ ಟಾರ್ಗೆಟ್ ಮಾಡಿರೋ ಆರೋಪ ಮಾಡಲಾಗಿದ್ದು, ವ್ಯಾಪಾರಿ ಹರಿ ಬಳಿ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿ ಬರುತ್ತಿದೆ.

ಗಿರಿನಗರ ಪೊಲೀಸ್ ಠಾಣೆಗೆ ಕರೆದೊಯ್ದು ಅಧಿಕಾರಿಗಳಿಂದ ಕಿರಿಕ್​​ ಮಾಡಿದ್ದು, ಫುಡ್ ಆಫೀಸರ್ಸ್ ವಿರುದ್ದ  ಸ್ಥಳೀಯರು ರೋಚ್ಚಿಗೆದ್ದಿದ್ದಾರೆ. ಫುಡ್ ಆಫೀಸರ್​ಗಳ ದೌರ್ಜನ್ಯದ ವಿಡಿಯೋ ವೈರಲ್ ಆಗುತ್ತಿದೆ.

 

Leave a Reply

Your email address will not be published.