ಪರೀಕ್ಷೆ ಮುಂದೂಡಿದರೆ ಉಳಿದವರಿಗೂ ಓದಲು ಸಹಾಯವಾಗುತ್ತೆ: ಹಿಜಬ್ ಹೋರಾಟಗಾರ್ತಿಯರ ಮನವಿ

ಜಿಲ್ಲೆ

ಉಡುಪಿ: ಕೋರ್ಟ್ ತೀರ್ಪು ಬರುವವರೆಗೂ ದಯವಿಟ್ಟು ನಮ್ಮ ಪರೀಕ್ಷೆಯನ್ನು ಮುಂದೂಡಿ ಎಂದು ಉಡುಪಿಯಲ್ಲಿ ಹಿಜಬ್ ಹೋರಾ ಟಗಾರ್ತಿಯರು ಮನವಿ ಮಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಹಿಜಬ್ ಹೋರಾಟಗಾರ್ತಿಯರು, ನಮಗೆ ಪರೀಕ್ಷೆ ಹತ್ತಿರ ಬರುತ್ತಿದೆ. ನಮ್ಮ ಪರೀಕ್ಷೆಯನ್ನು ಮುಂದೂಡಬೇಕು. ಹೈಕೋರ್ಟ್ ತೀರ್ಪು ಬರೋವರೆಗೂ ಮುಂದೂಡಬೇಕು. ಈ ಬಗ್ಗೆ ಶಿಕ್ಷಣ ಅಧಿಕಾ ರಿಗಳಿಗೂ ಮನವಿ ಮಾಡಿದ್ದೇವೆ. ಪರೀಕ್ಷೆ ಮುಂದೂಡಿದರೆ ಉಳಿದವರಿಗೂ ಓದಲು ಸಹಾಯವಾಗುತ್ತೆ ಎಂದು ಕೇಳಿಕೊಂಡರು.  ಒಂದು ತಿಂಗಳಿಂದ ನಮಗೆ ಬೆದರಿಕೆ ಬರುತ್ತಿದೆ. ನಮ್ಮ ಡಿಟೇಲ್ಸ್ ತಿಳಿದ ಬಳಿಕ ನಮಗೆ ಬೆದರಿಕೆ ಕರೆ ಬರುತ್ತಿದೆ. ನಮ್ಮ ಜೊತೆಗೆ ಇದ್ದವರಿಗೆ ಹೊಡೆದಿದ್ದಾರೆ. ಹೋಟೆಲ್ ಧ್ವಂಸ ಮಾಡಿದ್ದಾರೆ.

ನಮ್ಮ ವಿರುದ್ಧ ಹಲ್ಲೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಿ. ನಾವು ನಮ್ಮ ಧರ್ಮಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಕುಟುಂಬ ವನ್ನು ಮಧ್ಯದಲ್ಲಿ ತರಬೇಡಿ ಎಂದು ಮನವಿ ಮಾಡಿಕೊಂಡರು. ಟೆರರಿಸ್ಟ್ ಸಂಪರ್ಕ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಅಧಿಕಾರಿಗಳು ಪರೀಕ್ಷೆ ಮುಂದೂಡುವ ಬಗ್ಗೆ ಸರ್ಕಾರದ ಜೊತೆ ಮಾತಾಡುತ್ತೇವೆ ಎಂದಿದ್ದಾರೆ. ಕೋರ್ಟ್ ತೀರ್ಪು ನಮ್ಮ ಪರವಾಗಿ ಬರುವ ನಿರೀಕ್ಷೆ ಇದೆ. ಪ್ರಸ್ತುತ ರಾಜ್ಯದಲ್ಲಿ ರಾಜಕೀಯ ಆಟ ನಡೆಯುತ್ತಿದೆ. ಇದನ್ನು ಬೇಕಂತ ಮಾಡುತ್ತಿದ್ದಾರೆ. ಕೋರ್ಟ್ ತೀರ್ಪು ಆದಷ್ಟು ಬೇಗ ಬರಬೇಕು ಎಂದು

Leave a Reply

Your email address will not be published.