
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಜೇಮ್ಸ್’ ಸಿನಿಮಾಗೆ ಸಿಕ್ತು ‘UA’ ಸರ್ಟಿಫಿಕೇಟ್..!
ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಬಹು ನಿರೀಕ್ಷಿತ ‘ಜೇಮ್ಸ್’ ಸಿನಿಮಾಗೆ ಸೆನ್ಸಾರ್ ಮಂಡಳಿ ‘ಯುಎ’ ಸರ್ಟಿಫಿಕೇಟ್ ಕೊಟ್ಟಿದೆ. ಚಂದನವನದ ‘ಜೇಮ್ಸ್’ ಸಿನಿಮಾ ನೋಡಬೇಕು ಎಂದು ಕನ್ನಡಿಗರು ಮಾತ್ರವಲ್ಲ, ಇಡೀ ವಿಶ್ವದ ಜನರೇ ಕಾಯುತ್ತಿದ್ದಾರೆ. ಜೇಮ್ಸ್’ ಸಿನಿಮಾದ ಪ್ರತಿಯೊಂದು ಅಪ್ಡೇಟ್ಗಳನ್ನು ಕೇಳಿಸಿಕೊಳ್ಳಲು ಎಲ್ಲರೂ ಕಾತುರದಿಂದ ಕಾಯುತ್ತಿರುತ್ತಾರೆ. ಈಗ ಜೇಮ್ಸ್ ಸಿನಿಮಾದ ಕನ್ನಡ ಅವತರಣಿಕೆಯ ಸೆನ್ಸಾರ್ ಮುಗಿದಿದೆ.
ಸಿನಿಮಾದಲ್ಲಿ ಯಾವುದೇ ದೃಶ್ಯಗಳನ್ನು ಕಟ್ ಮಾಡದೆ ಸೆನ್ಸಾರ್ ಮಂಡಳಿಯು ‘ಯುಎ’ ಸರ್ಟಿಫಿಕೇಟ್ ಕೊಟ್ಟಿದೆ. ಅಲ್ಲದೇ ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಸೆನ್ಸಾರ್ ಮಂಡಳಿಯು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಈ ಕುರಿತು ನಿರ್ದೇಶಕ ಚೇತನ್ ಮತ್ತು ನಿರ್ಮಾಪಕ ಕಿಶೋರ್ ಅವರು ಸಿನಿಮಾ ಬಗ್ಗೆ ಸೆನ್ಸಾರ್ ಮಂಡಳಿ ಕೊಟ್ಟ ಅಭಿಪ್ರಾಯವನ್ನು ತಿಳಿಸಿದ್ದು, ಅಭಿಮಾನಿಗಳಲ್ಲಿ ಮುಂದೆಯೂ ಇದೇ ರೀತಿ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾರೆ.