Home Cinema ಪ್ರಜಾಕೀಯದ ವಿರುದ್ಧ ಸಿಡಿದೆದ್ದಿದ್ಯಾರು..? ವಿವಾದ…ಚರ್ಚೆ… ಏನಿದು  ಉಪ್ಪಿ ಮ್ಯಾಟರ್..!

ಪ್ರಜಾಕೀಯದ ವಿರುದ್ಧ ಸಿಡಿದೆದ್ದಿದ್ಯಾರು..? ವಿವಾದ…ಚರ್ಚೆ… ಏನಿದು  ಉಪ್ಪಿ ಮ್ಯಾಟರ್..!

317
0
SHARE

ಬೆಂಗಳೂರು.ಪ್ರಜಾಕೀಯ ಈ ಪಕ್ಷ ಹುಟ್ಟಿಕೊಂಡಗಾಲೇ ಒಂದು ರೀತಿಯ ವೈಬ್ರೆಷನ್ ಶುರುವಾಗಿತ್ತು. ರಾಜಕೀಯ ಪಕ್ಷಗಳ ರೆಗ್ಯುಲರ್ ವಿಚಾರಧಾರೆಗಳನ್ನ ಮುರಿದು ಪ್ರಜಾಕೀಯ ಸೌಂಡ್ ಮಾಡೋ ಉತ್ಸಾಹದಲ್ಲಿತ್ತು. ಆದರೆ ಈಗ ಅದಕ್ಕೊಂದು ನೆಗೆಟಿವ್ ಕಾಮೆಂಟ್ ಬಿದ್ದಿದೆ. ಇದರಿಂದ ರಿಯಲ್‌ಸ್ಟಾರ್ ಉಪೇಂದ್ರ ಅಭಿಮಾನಿಗಳು ಈಗ ರೊಚ್ಚಿಗೆದ್ದಿದ್ದಾರೆ. ಇಷ್ಟುದಿನಗಳಕಾಲ ತಮ್ಮ ಪ್ರಜಾಕೀಯದ ಪರವಾಗಿ ಟ್ವಿಟರ್‌ನಲ್ಲಿ ಅರಿವು ಮೂಡಿಸುತ್ತಿದ್ದ ಪ್ರಜಾಕೀಯನ್ಸ್ ಇದೇ ಮೊದಲಬಾರಿಗೆ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. ಇದಕ್ಕೆ ಮೂಲಕಾರಣವಾಗಿರೋದು ಮಾಜಿ ಡಿಎಸ್ಪಿ ಹಾಗೂ ಭಾರತೀಯ ಜನಶಕ್ತಿ ಪಕ್ಷದ ಅಧ್ಯಕ್ಷೆ ಅನುಪಮಾ ಶೆಣೈ.

ಟ್ವಿಟರ್‌ನಲ್ಲಿ ಅನುಪಮಾ ಶೆಣೈ ಉಪೇಂದ್ರ ಥಿಯರಿಗಳನ್ನ ಖಂಡಿಸಿದ್ದಾರೆ. ಅಲ್ಲದೇ ಪ್ರಜಾಕೀಯ ಕೊರೊನಾಗಿಂತ ಡೇಂಜರ್ ಎನ್ನುವ ಪೋಸ್ಟ್ ಮಾಡಿದ್ದಾರೆ. ಪ್ರಜಾಕೀಯ ಜನರ ದಿಕ್ಕು ತಪ್ಪಿಸೋ ಕೆಲಸ ಮಾಡ್ತಿದೆ. ಹಾಗಾಗೀ, ಮುಂದಿನ ದಿನಗಳಲ್ಲಿ ಪ್ರಜಾಕೀಯ ಅತೀ ದೊಡ್ಡ ರಾಜಕೀಯ ನಡೆಸೋ ಪಕ್ಷವಾಗಿ ಬೆಳೆಯುತ್ತೆ ಅಂತ ಸ್ಟೈಟ್ ಬಾಂಬ್ ಎಸೆದಿದ್ದಾರೆ. ಇದು ಸಹಜವಾಗಿಯೇ ಉಪ್ಪಿಯನ್ನ ಬೆಂಬಲಿಸುವ ಹಾಗೂ ಪ್ರಜಾಕೀಯ ಪಕ್ಷದ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟವರನ್ನ ದೊಡ್ಡಮಟ್ಟದಲ್ಲಿ ಕೆರಳಿಸಿಬಿಟ್ಟಿದೆ.

ಉಪೇಂದ್ರರ ಸಿನಿಮಾಗಳೇ ಅವರ ಬಂಡವಾಳ ತಿಳಿಸುತ್ತೆ. ಓಂ ಅಂತ ಶಾಂತಿಮಂತ್ರದ ಹೆಸರಿಟ್ಟು ಚಿತ್ರದಲ್ಲಿ ಬರೀ ಹಿಂಸೆಯನ್ನೇ ತೋರಿಸಿದ್ರು. ಎ ಅಂತ ಟೈಟಲ್ ಇಟ್ಟು ಪಡ್ಡೆಹುಡುಗರೆಲ್ಲ ಬ್ಲೂ ಫಿಲಂಗೆ ಕಾದುಕುಳಿತು ಏನೂ ಇಲ್ಲ ಎನ್ನುಂವತಾಯಿತು. ಅದೇ ರೀತಿ ಪ್ರಜಾಕೀಯ ಕೂಡ ದೊಡ್ಡಮೋಸವಾಗಿರುತ್ತೆ. ಎಲ್ಲರೂ ಕಾದುನೋಡಿ ಅಂತ ಉಪೇಂದ್ರರ ಕನಸಿನ ಪ್ರಜಾಕೀಯಕ್ಕೆ ಟಾಂಗ್ ಕೊಟ್ಟಿದ್ದಾರೆ ಈ ಅನುಪಮಾ ಶೆಣೈ.

ಪ್ರಜಾಕೀಯ ಪಕ್ಷದ ಯೋಚನೆಗಳನ್ನ ತಮ್ಮ ಸಾಲುಸಾಲು ಟೀಕೆಗಳಿಂದ ವಿವರಿಸಿರೋ ಅನುಪಮಾ ಶೆಣೈ ಪ್ರಜಾಕೀಯವನ್ನ ಕೊರೋನಾಗೆ ಹೋಲಿಸಿದ್ದಾರೆ. ಕೊರೋನಾ ಬರಬಾರದು ಎಂದರೇ ಮಾಸ್ಕ್ ಧರಿಸಬೇಕು. ಹಾಗೇಯೇ ಪ್ರಜಾಕೀಯ ಈಗ ಸಭ್ಯತೆಯ ಮುಖವಾಡವನ್ನ ಧರಿಸಿಯೇ ನಮ್ಮ ಬಳಿ ಬರ‍್ತಿದೆ. ಎರಡು ಕೂಡ ಬಹಳ ಡೇಂಜರ್ .ಹಾಗಾಗೀ ಎರಡರ ಬಗ್ಗೆಯೂ ಎಚ್ಚರಿಕೆಯಿಂದಿರಿ ಎಂದಿದ್ದಾರೆ. ಸೋ, ಈ ಕಾಮೆಂಟ್‌ಗಳ ಮೂಲಕ ಪ್ರಜಾಕೀಯ ಪಕ್ಷವನ್ನ ಬೆಂಬಲಿಸುವವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೀಗೆಬಂದ ಕಾಮೆಂಟ್‌ಗಳ ರಾಶಿಗೆ ಈಗ ಪ್ರಜಾಕೀಯ ಬೆಂಬಲಿಗರು ಅನುಪಮಾರನ್ನ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿನಿಮಾಗೂ ರಾಜಕೀಯ ಚಟುವಟಿಕೆಗಳಿಗೂ ಹೋಲಿಕೆ ಮಾಡಿರೋ ಅನುಪಮಾ ವಿರುದ್ಧ ಗರಂ ಆಗಿಬಿಟ್ಟಿದ್ದಾರೆ. ಇಷ್ಟುಕೀಳುಮಟ್ಟದ ರಾಜಕೀಯ ಹೇಳಿಕೆ ನೀಡೋ ನೀವು ನಿಮ್ಮ ವ್ಯಕ್ತಿತ್ವವನ್ನ ತೋರಿಸಿಬಿಟ್ಟಿದ್ದೀರಿ. ಪ್ರಜಾಕೀಯ ವಿಚಾರಗಳು ಎಷ್ಟುವೇಗವಾಗಿ ಜನರಿಗೆ ತಲುಪುತ್ತಿದೆ ಎನ್ನುವುದಕ್ಕೆ ನಿಮ್ಮ ಈ ಪೊಸ್ಟ್‌ ಗಳೇ ಸಾಕ್ಷಿ ಅಂತ ತಮ್ಮ ನೆಚ್ಚಿನ ನಾಯಕನ ಸಾಥ್ ನೀಡಿದ್ದಾರೆ. ಉಪೇಂದ್ರ ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು ಎನ್ನುವ ಸಲಹೆಯನ್ನೂ ನೀಡಿದ್ದಾರೆ.

ಅಂತೂ ಉಪೇಂದ್ರ ರಾಜಕೀಯ ಎಂಟ್ರಿಗೆ ಈ ಹಿಂದೆಯೂ ತೆರೆಮರೆಯಲ್ಲಿ ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿತ್ತು. ಆದರೆ ಉಪ್ಪಿ ಇದಕ್ಕೆಲ್ಲ ತಮ್ಮ ಕೆಲಸದ ಮೂಲಕವೇ ಉತ್ತರ ಕೊಡ್ತಿವಿ ಎಂದಿದ್ರು. ಖಂಡಿತ ಪ್ರಜಾಕೀಯ ಬದಲಾವಣೆಯ ಗಾಳಿಯನ್ನ ತರುತ್ತೆ ಎನ್ನುವ ಪ್ರಾಮಿಸ್ ಮಾಡಿದ್ರು. ಮೊದಲಬಾರಿಗೆ ಈ ರೀತಿ ಬಹಿರಂಗವಾಗಿ ಉಪ್ಪಿ ಸಿದ್ಧಾಂತಗಳ ವಿರುದ್ಧ ಈಗ ಅನುಪಮಾ ಶೆಣೈ ಮಾತನಾಡಿ ಬಹಳ ಚರ್ಚೆಗೀಡಾಗಿದ್ದಾರೆ. ಉಪೇಂದ್ರರವರು ತಾನು ಮಾತ್ರ ಸರಿ ಬೇರೆಯವರೆಲ್ಲ ತಪ್ಪು ಎನ್ನುವ ಧೋರಣೆ ಹೊಂದಿದ್ದಾರೆ. ಹಾಗಾಗೀ, ಇಲ್ಲಿ ಜನರ ಉದ್ಧಾರ ಎಲ್ಲಿ ಆಗುತ್ತೆ? ಎನ್ನುವ ಪ್ರಶ್ನೆಯನ್ನ ಮುಂದಿಟ್ಟಿದ್ದಾರೆ. ಇಷ್ಟೆಲ್ಲ ಟ್ವಿಟರ್ ಬೆಳವಣಿಗೆಗಳು ನಡೆದರೂ ಉಪೇಂದ್ರ ಮಾತ್ರ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಸುಮ್ಮನಿದ್ದಾರೆ. ಎಲ್ಲರ ಕಾಲು ಎಳೆಯುತ್ತೆ ಕಾಲ ಅಂತ ಸದ್ಯದಲ್ಲೇ ಉಪ್ಪಿ ಈ ಕಾಮೆಂಟ್‌ಗಳಿಗೆ ರಿಯಾಕ್ಟ್ ಮಾಡಿದ್ರೂ ಆಶ್ಚರ್ಯವಿಲ್ಲ.

 

LEAVE A REPLY

Please enter your comment!
Please enter your name here