Home Cinema ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ ಫುಲ್ ಧಮಾಲ್…. ‘ಆ ಮೂರು’ ಸಿನಿಮಾಗಳ ಬಿಗ್ ನ್ಯೂಸ್ ಏನು..?

ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ ಫುಲ್ ಧಮಾಲ್…. ‘ಆ ಮೂರು’ ಸಿನಿಮಾಗಳ ಬಿಗ್ ನ್ಯೂಸ್ ಏನು..?

336
0
SHARE

ಬೆಂಗಳೂರು. ಪ್ರಜ್ವಲ್ ದೇವರಾಜ್‌ಗೆ ಇಂದು ಹುಟ್ಟುಹಬ್ಬದ ಫುಲ್ ಧಮಾಲ್. ಡೈನಾಮಿಕ್ ಪ್ರಿನ್ಸ್ ಬರ್ತಡೇಗೆ ಸಡಗರಕ್ಕೆ ಹೊಸ ನ್ಯೂಸ್‌ಗಳ ಸರಮಾಲೆಯೇ ಸಿಕ್ಕಿದೆ. ಸಿನಿಮಾ ಮೇಲೆ ಸಿನಿಮಾ ಮಾಡ್ತ ಫುಲ್ ಬ್ಯುಸಿಯಾಗಿರೋ ಪ್ರಜ್ವಲ್ ತಮ್ಮ ಮುಂದಿನ ಸಿನಿಮಾಗಳು ಹೇಗಿರುತ್ತೆ ಎನ್ನುವ ಹಿಂಟ್ ಕೊಟ್ಟಿದ್ದಾರೆ. ಬರ್ತಡೇ ಬಾಯ್ ಆಗಿ ಮಿಂಚ್ತಿರೋ ಪ್ರಜ್ವಲ್ ಜೋಷ್‌ನಲ್ಲಿರೋದಕ್ಕೂ ಈ ಹೊಸ ಬ್ರೇಕಿಂಗ್ ನ್ಯೂಸ್‌ಗಳೇ ಕಾರಣವಾಗಿದೆ.

ಪ್ರಜ್ವಲ್ ತಮ್ಮ ಬದುಕಿನ 33ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ತಮ್ಮ ಸಿನಿಕೆರಿಯರ್‌ನ ಬಹಳ ಬೇಗ ಶುರುಹಚ್ಚಿಕೊಂಡ ಪ್ರಜ್ವಲ್ ಸಿನಿಬದುಕಿನ ಉತ್ತುಂಗಕ್ಕೆ ಬಂದಿದ್ದಾರೆ. ತಮ್ಮ ಪಾತ್ರಗಳ ಆಯ್ಕೆಯಲ್ಲೂ ಬಹಳ ಚ್ಯೂಸಿಯಾಗಿರೋ ಪ್ರಜ್ವಲ್ ಈಗ ಕೆಲವು ಧಮ್‌ಧಾರ್ ಸಿನಿಮಾಗಳ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಹೊಸಕಿಚ್ಚು ಹಚ್ಚೋಕೆ ರೆಡಿಯಾಗಿದ್ದಾರೆ. ಪ್ರಜ್ವಲ್ ಬರ್ತಡೇ ಬ್ಯಾಷ್‌ಗೆ ಪ್ರಜ್ವಲ್ ಮುಂದಿನ ಮೂರು ಸಿನಿಮಾಗಳ ತಂಡಗಳಿಂದ ಹೊಸ ಗಿಫ್ಟ್ ಸಿಕ್ಕಿದೆ.

ಇನ್ಸ್‌ಪೆಕ್ಟರ್ ವಿಕ್ರಂ, ವೀರಂ ಹಾಗೂ ಅರ್ಜುನ್ ಗೌಡ ಸಿನಿಮಾಗಳ ಹೊಸ ಪೋಸ್ಟರ್‌ಗಳು ಉಡುಗೊರೆಯ ರೂಪದಲ್ಲಿ ಪ್ರಜ್ವಲ್ ಸಂಭ್ರಮವನ್ನ ಹೆಚ್ಚಿಸಿದೆ. ಮೂರು ಸಿನಿಮಾಗಳಲ್ಲೂ ಪ್ರಜ್ವಲ್‌ಗೆ ಬೇರೆಬೇರೆ ಶೇಡ್‌ಗಳಿರೋ ಪಾತ್ರಗಳಿವೆ. ಜಂಟಲ್‌ಮ್ಯಾನ್ ಸಿನಿಮಾದ ಸಕ್ಸಸ್ ಬಳಿಕ ಅಂತಹುದೇ ಕಂಟೆಂಟ್ ಇರೋ ಸಿನಿಮಾಗಳ ಬೆನ್ನುಹತ್ತಿರೋ ಈ ಡೈನಾಮಿಕ್ ಪ್ರಿನ್ಸ್ ಪ್ರೇಕ್ಷಕರಿಗೆ ಹೊಸರೀತಿಯ ಸಿನಿರುಚಿ ಹತ್ತಿಸಿದ್ದಾರೆ. ಒಂದಕ್ಕಿಂತ ಒಂದು ಭಿನ್ನ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಮೂರು ಪೋಸ್ಟರ್‌ಗಳ ಲುಕ್ ಚರ್ಚೆಯಾಗ್ತಿವೆ.

ಇನ್ಸ್‌ಪೆಕ್ಟರ್ ವಿಕ್ರಂ. ಪ್ರಜ್ವಲ್ ಖಾಕಿ ಧರಿಸಿ ಅಬ್ಬರಿಸೋಕೆ ರೆಡಿಯಾಗಿರೋ ಸಿನಿಮಾ. ಚಿತ್ರದ ಟೀಸರ್ ಹಾಗೂ ಹಾಡೊಂದು ರಿಲೀಸ್ ಆಗಿ ಪ್ರಜ್ವಲ್ ಅಭಿಮಾನಿಗಳು ಫುಲ್ ಎಕ್ಸ್‌ಯಟ್ ಆಗಿಬಿಟ್ಟಿದ್ರು. ಈಗ ಈ ಚಿತ್ರತಂಡ ಮತ್ತೊಂದು ಸರ್‌ಪ್ರೈಸ್ ಕೊಟ್ಟಿದೆ. ಕಾಲಕ ಮೇಲೆ ಕಾಲು ಹಾಕಿಕೊಂಡು ಜೀಪ್ ಮುಂದೆ ಪೋಸ್ ನೀಡ್ತಿರೋ ಪ್ರಜ್ವಲ್ ಒಂದು ಆಕ್ಷನ್ ಮಸಾಲಾ ಸಿನಿಮಾ ಕೊಡ್ತಿದಾರೆ ಅಂತ ಹೊಸದಾಗಿ ಹೇಳಬೇಕಿಲ್ಲ. ಶ್ರೀ ನರಸಿಂಹ ಆಕ್ಷನ್-ಕಟ್ ಹೇಳ್ತಿರೋ ಈ ಇನ್ಸ್‌ಪೆಕ್ಟರ್ ವಿಕ್ರಂಗೆ ವಿಖ್ಯಾತ್ ಬಂಡವಾಳ ಹೂಡಿದ್ದಾರೆ. ಠಾಫ್ ಪೊಲೀಸ್ ಆಫಿಸರ್ ಆಗಿ ಪ್ರಜ್ವಲ್ ಮೋಡಿ ಮಾಡೇಮಾಡ್ತಾರೆ ಎನ್ನುವುದೇ ಸದ್ಯದ ಗಾಂಧಿನಗರದ ಭವಿಷ್ಯ.

ಇನ್ನು ಅರ್ಜುನ್ ಗೌಡ ಹಾಗೂ ವೀರಂ ಲುಕ್‌ಗಳನ್ನ ನೋಡ್ತಿದ್ರೆ ಮಾಸ್ ಎಲಿಮೆಂಟ್‌ಗಳು ಅಬ್ಬರಿಸಿಬೊಬ್ಬಿರಿಯುತ್ತಿದೆ. ಲಾಂಗ್ ಬಾಯಲ್ಲಿ ಹಿಡಿದುಕೊಂಡ ಪ್ರಜ್ವಲ್ ಒಂದು ಕಿಲ್ಲಿಂಗ್ ಮ್ಯಾನರಿಸಂನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಈ ಸಿನಿಮಾಗಳು ಕೂಡ ಪ್ರಜ್ವಲ್ ಸಿನಿಕೆರಿಯರ್‌ಗೆ ಹೊಸ ಶೇಪ್ ಕೊಡೋ ತರಾತುರಿಯಲ್ಲಿವೆ.

ಈ ಸಲ ಅದ್ದೂರಿ ಹುಟ್ಟುಹಬ್ಬದ ಸಡಗರಕ್ಕೆ ಬ್ರೇಕ್ ಹಾಕಿದ ಪ್ರಜ್ವಲ್ ತಮ್ಮ ಅಭಿಮಾನಿಗಳಿಗೆ ಒಂದು ಮನವಿ ಮಾಡಿಕೊಂಡ್ರು. ಕೊರೋನಾ ಪರಿಸ್ಥಿತಿ ಮೀತಿಮೀರುತ್ತಿದೆ. ಇಂತಹ ಕಷ್ಟಕರ ಸಮಯದಲ್ಲಿ ಬರ್ತಡೇ ಆಚರಿಸಿಕೊಳ್ಳೊದು ಬೇಡ ಎನ್ನುವ ಮಹತ್ವದ ನಿರ್ಧಾರಕ್ಕೆ ಬಂದಿದ್ರು. ಅಲ್ಲದೇ ಎಲ್ಲವೂ ಸರಿಹೋದ ಮೇಲೆ ಖಂಡಿತ ನಾವೆಲ್ಲರೂ ಸೇರೋಣ ಅಂತ ಪ್ರಾಮೀಸ್ ಮಾಡಿದ್ರು. ಆಡಂಬರದ ಹುಟ್ಟುಹಬ್ಬದ ಸಂಭ್ರಮವನ್ನ ಬದಿಗಿಟ್ಟ ಪ್ರಜ್ವಲ್ ಈ ಬಾರಿಯ ಬರ್ತಡೇಯನ್ನ ಬಹಳ ಸಮಾಜಮುಖಿಯಾಗಿಯೇ ಸೆಲೆಬ್ರೆಟ್ ಮಾಡಿದ್ದಾರೆ. ವಿಖ್ಯಾತ್ ನಿರ್ಮಾಣ ಸಂಸ್ಥೆಯ ತಂಡದ ಜೊತೆ ತೆರಳಿ ಪೋಲಿಸರಿಗೆ ಪಿಪಿಟಿ ಕಿಟ್‌ಗಳನ್ನ ನೀಡಿ ತಮ್ಮ ಸಮಯಪ್ರಜ್ಞೆ ಮೆರೆದಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಪೋಲಿಸರು ತಮ್ಮ ಶಕ್ತಿಮೀರಿ ದುಡಿದಿದ್ದಾರೆ. ಥ್ಯಾಂಕ್ಸ್ ಹೇಳೊಕೆ ಈ ಕೆಲಸಕ್ಕೆ ಕೈ ಹಾಕಿದ್ದೇವೆ ಎಂದಿದ್ದಾರೆ ಈ ಡೈನಾಮಿಕ್ ಪ್ರಿನ್ಸ್.

ಇನ್ನು ಸ್ಯಾಂಡಲ್‌ವುಡ್ ಕೂಡ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ಶುಭಕೋರಲು ಮರೆತಿಲ್ಲ. ನಿರ್ದೆಶಕ ಎ.ಹರ್ಷ, ಡಾಲಿ ಧನಂಜಯ್, ತರುಣ್ ಸುಧೀರ್, ನೆನಪಿರಲಿ ಪ್ರೇಮ್, ಪವನ್ ಒಡೆಯರ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಪ್ರಜ್ವಲ್ ಜನ್ಮದಿನದ ಶುಭಶಯಗಳನ್ನ ಸಲ್ಲಿಸಿದ್ದಾರೆ. ಹೀಗೆ ನಗುನಗುತ ಸಿನಿಮಾ ಮಾಡ್ತೀರು ಅಂತ ಮನದುಂಬಿ ಹಾರೈಸಿದ್ದಾರೆ. ಅಂತೂ ಕೆಲವು ಸೌಂಡ್ ಬ್ರೇಕಿಂಗ್ ಸಿನಿಮಾಗಳ ಮೂಲಕ ಸಿನಿಮಾಪ್ರೇಮಿಗಳ ಮನಗೆಲ್ಲೋಕೆ ಪ್ಲಾನ್ ಮಾಡ್ತಿರೋ ಪ್ರಜ್ವಲ್ ಈ ಹೊಸ ಲುಕ್‌ಗಳಿಂದ ಗಮನ ಸೆಳೆದಿದ್ದಾರೆ. ಕೊರೋನಾ ಪರಿಸ್ಥಿತಿ ಒಂದು ಹಂತಕ್ಕೆ ಬಂದಮೇಲೆ ಈ ಚಿತ್ರತಂಡಗಳು ಇನ್ನಷ್ಟು ಹೊಸ ಅಪ್‌ಡೇಟ್‌ಗಳನ್ನ ನೀಡೋಕೆ ಸಜ್ಜಾಗಿದೆ. ಒಟ್ಟಿನಲ್ಲಿ ಈ ಸಲದ ಬರ್ತಡೇಯನ್ನ ಪ್ರಜ್ವಲ್‌ಗೆ ಎಂದೂ ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ ಅಭಿಮಾನಿಗಳ ಪ್ರೀತಿ ಹಾಗೂ ಈ ಮೂರು ಸಿನಿಮಾಗಳ ಸಂತೋಷ ಯಾವಾಗಲೂ ನೆನಪಿನಲ್ಲಿ ಉಳಿಯುವಂತಾದ್ದು. ಒನ್ಸ್ ಅಗೇನ್ ಹ್ಯಾಪಿ ಬರ್ತಡೇ ಡೈನಾಮಿಕ್ ಪ್ರಿನ್ಸ್.

 

LEAVE A REPLY

Please enter your comment!
Please enter your name here