
Pro Kabaddi League.. ಸೆಮಿಫೈನಲ್ ಕಾದಾಟದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ದಬಾಂಗ್ ಡೆಲ್ಲಿಗೆ ಜಯ
ಬೆಂಗಳೂರು: ಸೆಮಿಫೈನಲ್ ಕಾದಾಟದಲ್ಲಿ ತವರಿನ ತಂಡ ಬೆಂಗಳೂರು ಬುಲ್ಸ್ ವಿರುದ್ಧ ದಬಾಂಗ್ ಡೆಲ್ಲಿ 40-35, 5 ಅಂಕಗಳ ಅಂತರದ ಜಯ ಗಳಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಪಂದ್ಯದ ಆರಂಭದಿಂದಲೂ ಬೆಂಗಳೂರು ಮೇಲೆ ಸವಾರಿ ಮಾಡಿದ ಡೆಲ್ಲಿ ತಂಡದ ಕ್ಯಾಪ್ಟನ್ ನವೀನ್ ಕುಮಾರ್ ಸೂಪರ್ 10 ಅಂಕಗಳಿಸಿ ಗೆಲುವಿನ ರೂವಾರಿಯಾದರು. ಬುಲ್ಸ್ ಪರ ಗೆಲುವಿಗಾಗಿ ಹೋರಾಡಿದ ಪವನ್ ಕುಮಾರ್ ಹೋರಾಟ ವ್ಯರ್ಥವಾಯಿತು. ಮೊದಲಾರ್ಧದಲ್ಲಿ ಡೆಲ್ಲಿ 16 – ಬೆಂಗಳೂರು 17 ಪಾಯಿಂಟ್ಗಳೊಂದಿಗೆ ಬೆಂಗಳೂರು ಒಂದಂಕ್ಕದ ಮುನ್ನಡೆ ಪಡೆದುಕೊಂಡಿತು. ಬಳಿಕ ದ್ವಿತೀಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಡೆಲ್ಲಿ ಬುಲ್ಸ್ ಬೆವರಿಳಿಸಿತು.
ಬೆಂಗಳೂರು ಬುಲ್ಸ್ 24 ರೈಡ್, 9 ಟೇಕಲ್, 2 ಇತರ ಅಂಕ ಸಹಿತ ಒಟ್ಟು 35 ಅಂಕ ಕಲೆ ಹಾಕಿತು. ಡೆಲ್ಲಿ 23 ರೈಡ್, 2 ಸೂಪರ್ ರೈಡ್, 11 ಟೇಕಲ್, 4 ಆಲೌಟ್ ಮತ್ತು 2 ಇತರ ಅಂಕ ಸಹಿತ 40 ಅಂಕ ಸಂಪಾದಿಸಿ 5 ಅಂಕಗಳ ಜಯ ಸಾಧಿಸಿತು. ರೈಡಿಂಗ್ನಲ್ಲಿ ಡೆಲ್ಲಿ ಪರ ನವೀನ್ ಕುಮಾರ್ 13 ರೈಡ್, 1 ಬೋನಸ್ ಸಹಿತ 14 ಪಾಯಿಂಟ್ ತಂಡಕ್ಕೆ ಕೊಡುಗೆ ನೀಡಿದರು. ಇತ್ತ ಬೆಂಗಳೂರು ಪರ ಪವನ್ ಕುಮಾರ್ 14 ರೈಡ್, 4 ಬೋನಸ್ ಸಹಿತ 18 ಅಂಕ ಕಲೆ ಹಾಕಿದರೂ ಹೋರಾಟ ವ್ಯರ್ಥ ಆಯಿತು.