ಬೆಲೆ ಏರಿಕೆಯ ವಿರುದ್ಧದ ಪ್ರತಿಭಟನೆಯಿಂದ ಶ್ರೀ ರಾಮನಿಗೆ ಅವಮಾನ ಹೇಗೆ?: ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನೆ

ಬೆಂಗಳೂರು

ಬೆಂಗಳೂರು: ಬೆಲೆ ಏರಿಕೆಯ ವಿರುದ್ಧದ ಪ್ರತಿಭಟನೆಯಿಂದ ಶ್ರೀ ರಾಮನಿಗೆ ಅವಮಾನ ಹೇಗೆ? ಎಂದು ಅಮಿತ್ ಶಾ ಗೆ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಬೆಲೆಯೇರಿಕೆಯಿಂದ ಜನರ ಸಂಕಷ್ಟವನ್ನು ಕಾಂಗ್ರೆಸ್ ಪ್ರತಿಭಟನೆಯ‌ ಮೂಲಕ ವ್ಯಕ್ತಪಡಿಸುತ್ತಿದೆ. ಬೆಲೆಯೇರಿಕೆ ಬಿಸಿ ರಾಮನ ಭಕ್ತರಿಗೂ ತಟ್ಟಿದೆ,ರಹೀಂನ ಭಕ್ತರಿಗೂ ತಟ್ಟಿದೆ. ಜನರ ಧ್ವನಿಯಾಗಿ ಕಾಂಗ್ರೆಸ್ ಮಾಡುತ್ತಿರುವ ಹೋರಾಟ ಶಾ ರವರಿಗೆ ನಡುಕ‌ ತಂದಿದೆ.

ಹಾಗಾಗಿ ಬೆಲೆಯೇರಿಕೆ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಶ್ರೀರಾಮನ ಮೊರೆ ಹೋಗಿದ್ದಾರೆ” ಎಂದು ಹೇಳಿದ್ದಾರೆ. ಅಮಿತ್ ಶಾರವರೆ., ಬೆಲೆಯೇರಿಕೆಯ ವಿರುದ್ಧದ ಪ್ರತಿಭಟನೆ ಶ್ರೀರಾಮನಿಗೆ ಹೇಗೆ ಅವಮಾನ ಮಾಡಿದಂತೆ.? ಇಂತಹ ಅವಿವೇಕದ ಥಿಯರಿಗಳು ನಿಮ್ಮ ತಲೆಯಲ್ಲಿ ಹುಟ್ಟುವುದಾದರೂ ಹೇಗೆ.? ಬೆಲೆಯೇರಿಕೆಯಿಂದ ಜನರು ಅನುಭವಿಸುತ್ತಿರುವ ನೋವು ನಿಮಗಿನ್ನು ಗೊತ್ತಿಲ್ಲ. ಮೂರ್ಖತನದ ಹೇಳಿಕೆ‌ ಕೊಡುವುದು ಬಿಟ್ಟು, ಮೊದಲು ಬೆಲೆಯೇರಿಕೆ ನಿಯಂತ್ರಿಸಿ ಆಗ ರಾಮನು ಕೂಡ ಮೆಚ್ಚುತ್ತಾನೆ” ಎಂದು ದಿನೇಶ್ ಗುಂಡೂ ರಾವ್ ಸಲಹೆ ನೀಡಿದ್ದಾರೆ.

Leave a Reply

Your email address will not be published.