
ಉಕ್ರೇನ್ ನಲ್ಲಿ ಬಲಿಯಾದ ಕನ್ನಡಿಗ : ನವೀನ್ ತಂದೆಗೆ ಫೋನ್ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ಮೋದಿ
ಹಾವೇರಿ: ಉಕ್ರೇನ್ ನ ಖಾರ್ಕೀವ್ ನಗರದಲ್ಲಿ ರಷ್ಯಾ ಪಡೆಗಳು ನಡೆಸಿದ ದಾಳಿಯಲ್ಲಿ ಹಾವೇರಿಯ ವಿದ್ಯಾರ್ಥಿ ನವೀನ್ ಶೇಖರಪ್ಪ (22) ಮೃತಪಟ್ಟಿದ್ಧಾರೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೀನ್ ಅವರ ತಂದೆಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ನವೀನ್ ಅವರ ತಂದೆಗೆ ಕರೆ ಮಾಡಿದ ಮೋದಿ ಅವರು ‘ನವೀನ್ ಸಾವಿನ ಸುದ್ದಿ ಕೇಳಿ ನಮಗೂ ಆಘಾತವಾಗಿದೆ. ನವೀನ್ ಮೃತದೇಹವನ್ನು ಆದಷ್ಟು ಬೇಗ ತರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಧೈರ್ಯಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಂತ್ವನ ಹೇಳಿದ್ದಾರೆ.