ಪ್ರಧಾನಿ ಬಂದಾಗ ರಸ್ತೆ ಮಾಡಿಸ್ತೀರಾ, ನಮ್ಮ ಮಕ್ಕಳು ಉತ್ತಮ ರಸ್ತೆಯಲ್ಲಿ ಓಡಾಡಬಾರದಾ: ಪ್ರಕಾಶ್ ರಾಜ್

ಚಲನಚಿತ್ರ

ಮೈಸೂರು: ಪ್ರಧಾನ ಮಂತ್ರಿಗಳು ಬಂದಾಗ ಮಾತ್ರ ರಸ್ತೆ ಸರಿ ಮಾಡುತ್ತೀರಾ. ನಮ್ಮ ಮಕ್ಕಳು ಒಳ್ಳೆಯ ರಸ್ತೆಯಲ್ಲಿ ಓಡಾಡಬಾರದಾ ಎಂದು ಬಿಜೆಪಿ ಸರ್ಕಾರದ ವಿರುದ್ಧ ನಟ ಪ್ರಕಾಶ್‌ ರಾಜ್‌ ಕಿಡಿಕಾರಿದ್ದಾರೆ.

ತೆರಿಗೆ ಹಣ ನಮ್ಮ ದುಡ್ಡು. ನಾನು ವರ್ಷಕ್ಕೆ 38 ಲಕ್ಷ ರೂ. ತೆರಿಗೆ ಕಟ್ಟುತ್ತೇನೆ. ಪ್ರಶ್ನಿಸುವುದು ನಮ್ಮ ಹಕ್ಕು. ಒಳ್ಳೆಯ ರಸ್ತೆಯಲ್ಲಿ ನಮ್ಮ ಮಕ್ಕಳು ಓಡಾಡಬಾರದಾ? ನಮ್ಮ ದುಡ್ಡಿನಲ್ಲಿ ಅವರು ಬದುಕೋದು. ಸಾರ್ವಜನಿಕರ ಹಣದಲ್ಲಿ ಬದುಕುವ ರಾಜಕಾರಣಿಗಳು ಬಂದಾಗ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡುತ್ತೀರಾ? ನಮಗಾಗಿ ಯಾಕೆ ರಸ್ತೆ ಸರಿ ಮಾಡಲ್ಲ ಎಂದು ಪ್ರಶ್ನೆ ಮಾಡಿದರು.

Leave a Reply

Your email address will not be published.