
Pro Kabaddi League: ಸೆಮಿಫೈನಲ್ ಗೆ ಬೆಂಗಳೂರು ಬುಲ್ಸ್ ಲಗ್ಗೆ
ವೈಟ್ ಫೀಲ್ಡ್ ನ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಕಬಡ್ಡಿ ಪಂದ್ಯಾವಳಿಯಲ್ಲಿ ಜೈಂಟ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡವು ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಣ ಪಂದ್ಯವು ಆರಂಭದಲ್ಲೇ ಒನ್ಸೈಡ್ ಪಂದ್ಯವಾಗಿ ಮಾರ್ಪಟ್ಟಿತು. ಬೆಂಗಳೂರು ಬುಲ್ಸ್ ಸ್ಟಾರ್ ರೈಡರ್ ಪವನ್ ಕುಮಾರ್ ಶೆಹ್ರಾವತ್ ಅವರ ಭರ್ಜರಿ ಪ್ರದರ್ಶನದ ಮುಂದೆ ಗುಜರಾತ್ ಆಟಗಾರರು ಸೋಲಿಗೆ ಶರಣಾಗಿದ್ದಾರೆ. ಈ ಮೂಲಕ ಬೆಂಗಳೂರು ಬುಲ್ಸ್ ಗೆಲುವಿನ ನಗೆ ಬೀರಿದೆ.