Home Cinema ಇಂದು ಫಿಲಂ ಚೇಂಬರ್‌ನಲ್ಲಿ ಮಹತ್ವದ ಸಭೆ..ಓಟಿಟಿ ಬೆಳವಣಿಗೆಯ ಮಧ್ಯೆಯೇ ನಿರ್ಮಾಪಕರ ಕುತೂಹಲಕಾರಿ ನಡೆ

ಇಂದು ಫಿಲಂ ಚೇಂಬರ್‌ನಲ್ಲಿ ಮಹತ್ವದ ಸಭೆ..ಓಟಿಟಿ ಬೆಳವಣಿಗೆಯ ಮಧ್ಯೆಯೇ ನಿರ್ಮಾಪಕರ ಕುತೂಹಲಕಾರಿ ನಡೆ

329
0
SHARE

ಬೆಂಗಳೂರು. ಇಂದು ಸಂಜೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನಿರ್ಮಾಪಕರು ಸೇರಿದಂತೆ ಚಿತ್ರರಂಗದ ಅನೇಕ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಗೆ ರೇಸ್‌ಕೋರ್ಸ್ ಬಳಿಯಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಸಭೆಯನ್ನ ಆಯೋಜಿಸಲಾಗಿದೆ.

ಓಟಿಟಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿರ್ಮಾಪಕರ ಹಕ್ಕು ಪಡೆಯದೇ ಕನ್ನಡ ಚಿತ್ರಗಳನ್ನ ಪ್ರಸಾರ ಮಾಡುತ್ತಿರುವ ಬಗ್ಗೆ ಗಂಭೀರ ಚರ್ಚೆಗಳಾಗಲಿವೆ. ಇತ್ತೀಚೆಗೆ ಹಲವು ನಿರ್ಮಾಪಕರು ಇಂತಹ ಬೆಳವಣಿಗೆಗಳ ಮೇಲೆ ತನ್ನ ಧ್ವನಿ ಎತ್ತಿದ್ದರು.

ಲಾಕ್‌ಡೌನ್‌ನಿಂದಾಗೀ ಚಿತ್ರ ಪ್ರದರ್ಶನಗಳು ಸ್ಥಗಿತಗೊಂಡಿರುವುದರಿಂದ ಬದಲಾದ ಸಿನಿಮಾ ದೃಷ್ಟಿಕೋನದ ಬಗ್ಗೆಯೂ ಕೆಲವು ಮಹತ್ವದ ನಿರ್ಣಯಗಳನ್ನ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನ ಕಾಯ್ದುಕೊಂಡು ಈ ಸಭೆಯಲ್ಲಿ ಭಾಗವಹಿಸುವಂತೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಡಿ.ಕೆ.ರಾಮಕೃಷ್ಣ ಎಲ್ಲರಿಗೂ ಮನವಿ ಮಾಡಿಕೊಂಡಿದ್ದಾರೆ.

 

LEAVE A REPLY

Please enter your comment!
Please enter your name here