Home District ನೀರಿನ ತೊಟ್ಟಿಯನ್ನು ಸ್ಪೋಟಕ ವಸ್ತುಗಳಿಂದ ಸ್ಪೋಟಿಸಿದ ದುಷ್ಕರ್ಮಿಗಳು

ನೀರಿನ ತೊಟ್ಟಿಯನ್ನು ಸ್ಪೋಟಕ ವಸ್ತುಗಳಿಂದ ಸ್ಪೋಟಿಸಿದ ದುಷ್ಕರ್ಮಿಗಳು

473
0

ರಾಯಚೂರು :  ನೀರಿನ ತೊಟ್ಟಿಯೊಂದು ಸ್ಪೋಟಗೊಂಡು ಬಾರಿ ಅನಾಹುತವೊಂದು ತಪ್ಪಿದ ಘಟನೆ  ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಿರೇಹೆಸರೂರು ಗ್ರಾಮದಲ್ಲಿ  ನಡೆದಿದೆ. ಮಧ್ಯಾಹ್ನ 2.30  ಸುಮಾರಿಗೆ  ಮೌಲಪ್ಪ ಎಂಬವರ  ಜಮೀನನಲ್ಲಿ ನೀರಿನ ತೊಟ್ಟಿ ಏಕಾಏಕಿ ಸ್ಪೋಟವಾಗಿದೆ. ತಮ್ಮ ಏಳಿಗೆಯನ್ನು ಸಹಿಸದ ವ್ಯಕ್ತಿಗಳಿಂದ ನಡೆದ ಸ್ಫೋಟಕದ ಸಂಚು ಎಂದು  ಜಮೀನಿನ  ಮಾಲಿಕ  ಪೊಲೀಸರಿಗೆ ದೂರು ನೀಡಿದ್ದರು.

ಇನ್ನೂ ಈ ಸ್ಫೋಟಕ ವಸ್ತುಗಳು ಎಲ್ಲಿಂದ ಬಂತು ಯಾರು ತಂದು ಹಾಕಿದ್ದರು, ಯಾವ ಉದ್ದೇಶಕ್ಕೆ ಬಳಸಿದರು  ಎಂದು ಇನ್ನೂ ತಿಳಿದು ಬಂದಿಲ್ಲ. ದಿನಾಲ್ಲೂ ಈ ತೊಟ್ಟಿಯಲ್ಲಿ ಮಕ್ಕಳು ಆಟವಾಡಲು ಬರುತ್ತಿದ್ದು, ಅದೃಷ್ಟವಶಾತ್ ಈ ಘಟನೆಯ ನಡೆದ ದಿನ ಮಕ್ಕಳು ಇನ್ನೂ ಈಜಲು ಬಂದಿಲ್ಲದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ ಎಂದು  ಜಮೀನಿನ  ಮಾಲಿಕ ಮೌಲಪ್ಪ ತಿಳಿಸಿದ್ದರು. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ  ದೂರು ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Previous articleಅನವಶ್ಯಕ ಓಡಾಟ; ಲಾಠಿ ರುಚಿ; ವಾಹನಗಳು ಜಪ್ತಿ!
Next articleಆಕ್ಸಿಜನ್ ಲಭ್ಯತೆಯ ಕುರಿತು ಚರ್ಚೆ

LEAVE A REPLY

Please enter your comment!
Please enter your name here