ಆಕ್ಸಿಜನ್ ಪೂರೈಕೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡನಿಂದ ಪ್ರತಿಭಟನೆ..!!

ಆಕ್ಸಿಜನ್ ಪೂರೈಕೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡನಿಂದ ಪ್ರತಿಭಟನೆ..!!

311
0

ವರದಿ; ಭಾವ ಪ್ರಜಾ ಟಿವಿ, ರಾಯಚೂರು

ರಾಯಚೂರು ಬ್ರೇಕಿಂಗ್; ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಕೂಡಲೇ ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಜಿಲ್ಲಾಧಿಕಾರಿ ಕಚೇರಿ ಮುಂದೆ ಒಂಟಿಯಾಗಿ ಪ್ರತಿಭಟನೆ ನಡೆಸಿದ್ದಾರೆ.

ನವೋದಯ ಬೋಧಕ ಆಸ್ಪತ್ರೆಗೆ 210 ಆಕ್ಸಿಜನ್ ಸಿಲಿಂಡರ್ ಗಳ ಅಗತ್ಯವಿದೆ. ಆಕ್ಸಿಜನ್ ಬೆಡ್‍ನ 140 ಸೋಂಕಿತರಿಗೆ ತೊಂದರೆಯಾಗುತ್ತಿದೆ. ಜಿಲ್ಲಾಡಳಿತ ಕೇವಲ 100 ಸಿಲಿಂಡರ್ ಮಾತ್ರ ಪೂರೈಕೆ ಮಾಡಿದೆ. ಸಿಲಿಂಡರ್ ಗೆ ಆಕ್ಸಿಜನ್ ಫಿಲ್ ಮಾಡುವ ಎಂಪಿಸಿಎಲ್ ಪ್ಲಾಂಟ್ ನಿನ್ನೆಯಿಂದ ಬಂದ್ ಆಗಿರುವುದು ಇನ್ನಷ್ಟು ಅನಾಹುತ ಸೃಷ್ಟಿಗೆ ಕಾರಣವಾಗುತ್ತಿದೆ. ಕೂಡಲೇ ಕನಿಷ್ಠ 35 ಸಿಲಿಂಡರ್ ನವೋದಯ ಆಸ್ಪತ್ರೆಗೆ ಸರಬರಾಜು ಮಾಡದಿದ್ದರೆ ದುರಂತ ನಡೆಯುತ್ತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದರೆ ಚಾಮರಾಜನಗರದ ಘಟನೆ ಮರುಕಳಿಸುವ ಸಾಧ್ಯತೆಯಿದೆ. ಕೂಡಲೇ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಬೇಕು ಎಂದು ರವಿಬೋಸರಾಜು ಆಗ್ರಹಿಸಿದ್ದಾರೆ. ನವೋದಯ ಬೋಧಕ ಆಸ್ಪತ್ರೆಗೆ 1.8 ಕೆಎಲ್ ಆಕ್ಸಿಜನ್ ಜಿಲ್ಲಾಡಳಿತ ಸರಬರಾಜು ಮಾಡುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಆಕ್ಸಿಜನ್ ಸಿಲಿಂಡರ್ ಕೊರತೆ ಎದುರಾಗಿದೆ.

ಕಳೆದ ರಾತ್ರಿ ನಗರದ ಖಾಸಗಿ ನವೋದಯ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಉಂಟಾಗಿದ್ದು, ಇದೇ ಪರಿಸ್ಥಿತಿ ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಇದೆ. ಸಂಘ ಸಂಸ್ಥೆಗಳ ಸಹಾಯದಿಂದ ಕೆಲ ಆಮ್ಲಜನಕ ಸಿಲಿಂಡರ್ ಪೂರೈಕೆ ಮಾಡಿದ್ದು, ಜಿಲ್ಲಾಡಳಿತ ಸರಿಯಾದ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಇದ್ದುಕೊಂಡು ಸಕಲ ವ್ಯವಸ್ಥೆ ಮಾಡಬೇಕು ಎಂದು ಸಿಎಂ ಸೂಚಿಸಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸದೆ ನಿರ್ಲಕ್ಷ್ಯ ಹಾಗೂ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಸೋಂಕಿತರು ಇದ್ದು, ಪರಿಸ್ಥಿತಿ ಗಂಭೀರವಾಗಿದೆ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ಇದರ ಮಧ್ಯ ಭಾರತೀಯ ವೈಜ್ಞಾನಿಕ ಸಂಘ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಮೊಬೈಲ್ ಸಂದೇಶದ ಮೂಲಕ ಆಮ್ಲಜನಕದ ಅವಶ್ಯಕತೆ ಇರುವ ಹೊಸ ರೋಗಿಗಳನ್ನು ಭರ್ತಿ ಮಾಡಿಕೊಳ್ಳಬೇಡಿ. ಮುಂದೆ ಅಗುವ ಘಟನೆಗಳಿಗೆ ಸಂಘ ಜವಾಬ್ದಾರಿ ಹೊರುವುದಿಲ್ಲ ಎಂದು ಹೇಳಿದೆ.
ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ಆಮ್ಲಜನಕ ಪೂರೈಕೆ ಕುರಿತು ಸ್ಪಷ್ಟ ಭರವಸೆ ದೊರೆಯುವವರೆಗೆ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದರು.

VIAಆಕ್ಸಿಜನ್ ಪೂರೈಕೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡನಿಂದ ಪ್ರತಿಭಟನೆ..!!
SOURCEಆಕ್ಸಿಜನ್ ಪೂರೈಕೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡನಿಂದ ಪ್ರತಿಭಟನೆ..!!
Previous articleಆಸ್ಪತ್ರೆಯ ಹೊರಗೆ ಬಿದ್ದಿದೆ ರಾಶಿ ರಾಶಿ ಕೋವಿಡ್ ತ್ಯಾಜ್ಯ!
Next articleವಾಯುಭಾರ ಕುಸಿತ; ಉಡುಪಿಯಲ್ಲಿ ವರುಣನ ರೌದ್ರಾವತಾರ!

LEAVE A REPLY

Please enter your comment!
Please enter your name here