
ವಸತಿ ಇಲಾಖೆಗೆ ಭೂಮಿ ಒದಗಿಸಲು ನಮ್ಮ ಇಲಾಖೆ ಸಿದ್ಧವಿದೆ: ಸಚಿವ ಅಶೋಕ್
ಬೆಂಗಳೂರು: ಬೆಂಗಳೂರಿನಲ್ಲಿ ವಸತಿ ಇಲಾಖೆಗೆ ಭೂಮಿ ಒದಗಿಸಲು ನಮ್ಮ ಇಲಾಖೆ ಸಿದ್ಧವಿದೆ ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಶಾಸಕ ಮಂಜುನಾಥ್.ಆರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ವಸತಿ ಯೋಜನೆ ಗಳನ್ನು ಆರಂಭಿಸಿದರೆ ಕಂದಾಯ ಇಲಾಖೆ ಎಷ್ಟು ಬೇಕಾದರೂ ಜಮೀನು ಕೊಡಲು ಸಿದ್ದವಿದೆ. ಪ್ರತಿಯೊಬ್ಬರಿಗೂ ಸೂರು ಒದಗಿಸಿಕೊ ಡಲು ನಮ್ಮ ಸರ್ಕಾರ ಬದ್ದವಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಯಶವಂತಪುರ ಕೆರೆಗುಡ್ಡದಹಳ್ಳಿ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆಗೆ ನೀಡಿದ್ದ 6.14 ಗುಂಟೆ ಜಮೀನನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಹೇಳಿದ್ದಾರೆ.