ಪಿಎಸ್ ಐ ಅಕ್ರಮದಲ್ಲಿ ಎಲ್ಲರ ಬಣ್ಣ ನಾನು ಬಯಲು ಮಾಡುತ್ತೇನೆ: ಜೈಲಿನಲ್ಲಿ ಪೌಲ್ ರಂಪಾಟ

ಬೆಂಗಳೂರು

ಬೆಂಗಳೂರು: PSI ಅಕ್ರಮದಲ್ಲಿ ಬಂಧಿತರಾಗಿರುವ ಅಮೃತ್ ಪೌಲ್ ಅವರು ಸಿಐಡಿ ತನಿಖೆಗೆ ಸಹಕರಿಸುತ್ತಿಲ್ಲ. ಅಲ್ಲದೇ ಪ್ರಕರಣ ನಿಜಾಂಶವನ್ನು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವುದಾಗಿ ಪಟ್ಟು ಹಿಡಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜನಪ್ರತಿನಿಧಿಗಳ ಸಹಕಾರವಿಲ್ಲದೆ ಇದನ್ನೆಲ್ಲಾ ಹೇಗೆ ಮಾಡಲು ಸಾಧ್ಯ..? ಹೀಗಾಗಿ ಸೆಕ್ಷನ್ 164 ಅಡಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಹಠ ಹಿಡಿದಿರುವ ಅಮೃತ್ ಪೌಲ್ ಪಿಎಸ್ಐ ಹಗರಣದಲ್ಲಿ ಎಲ್ಲರ ಬಣ್ಣ ಬಯಲು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಅಮೃತ್ ಪೌಲ್ ರಾತ್ರಿ ಊಟ ಕೂಡ ಮಾಡದೆ ಸಿಐಡಿ ಅಧಿಕಾರಿಗಳ ಮಾತು ಕೇಳದೆ ಹೇಳಿಕೆ ನೀಡಲು ರಂಪಾಟ ಮಾಡಿದ್ದಾರೆ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.

 

 

 

Leave a Reply

Your email address will not be published.