ಚಿಕ್ಕಬಳ್ಳಾಪುರ. ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪಿಎಸ್ಐಗೆ ಕೊರೊನಾ ಸೋಂಕು ದೃಢವಾಗಿರುವ ಹಿನ್ನೆಲೆ ಪಿಎಸ್ಐ ವಾಸವಿದ್ದ ಕನಕನಗರವನ್ನು ಸೀಲ್ಡೌನ್ ಮಾಡಲಾಗಿದೆ. ಅಲ್ಲದೇ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಸೀಲ್ಡೌನ್ಗೂ ತಯಾರಿ ನಡೆಸಲಾಗುತ್ತಿದೆ.
ಆದರೆ ಇದೀಗ ಶಿಡ್ಲಘಟ್ಟ ತಾಲೂಕಿನ ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದ ಸಚಿವೆ ಶಶಿಕಲಾ ಜೊಲ್ಲೆ ಚಿಕ್ಕಬಳ್ಳಾಪುರ ಡಿಸಿ ಲತಾ ಸೇರಿದಂತೆ ಹಲವು ಅಧಿಕಾರಿಗಳಿಗೂ ಕೂಡ ಢವಢವ ಶುರುವಾಗಿದೆ. ಏಕೆಂದರೆ ಭೇಟಿ ವೇಳೆ ಕೊರೊನಾ ಸೋಂಕಿತ ಪಿಎಸ್ಐ ಇವರ ಜೊತೆಯಲ್ಲೇ ಇದ್ದರು.