PSI ಹಗರಣದಲ್ಲಿ ಗೃಹ ಸಚಿವರ ಆಪ್ತ ಸಹಾಯಕನ ಕೈವಾಡ: ಆರಗ ಜ್ಞಾನೇಂದ್ರ ಹೇಳಿದ್ದೇನು..?

ಬೆಂಗಳೂರು

ಬೆಂಗಳೂರು: ಪಿಎಸ್​ಐ ಹುದ್ದೆ ಹಗರಣದಲ್ಲಿ ಗೃಹ ಸಚಿವರ ಆಪ್ತ ಸಹಾಯಕನ ಕೈವಾಡವಿದೆ ಎಂಬ ಸುದ್ದಿಗಳಿಗೆ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗಣಪತಿ ಭಟ್ ಎನ್ನುವ ಹೆಸರಿನಲ್ಲಿ ನಮ್ಮ ಒಎಸ್​ಡಿ ಇದ್ದಾರೆ.  ಸಿಐಡಿ ವಶಕ್ಕೆ ಪಡೆದಿರುವ ವ್ಯಕ್ತಿ ನಮ್ಮ ಕಾರ್ಯಾಲಯದ ಸಿಬ್ಬಂದಿಯಲ್ಲ.

ಈ ಬಗ್ಗೆ ಗೊಂದಲ ಬೇಡ ಎಂದಿದ್ದಾರೆ. ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಶಿರಸಿ ಮೂಲದ ಗಣಪತಿ ಭಟ್​ಗೆ ಪಿಎಸ್​ಐ ಹಗರಣದ ಲಿಂಕ್ ಇದೆ ಎಂಬ ಮಾಹಿತಿ ಸಿಕ್ಕಿದೆ. ಅವರು ಸಾಕಷ್ಟು ವರ್ಗಾವಣೆಯಲ್ಲಿ ತೊಡಗಿದ್ದರು. ಅದನ್ನೇ ವೃತ್ತಿ, ಪ್ರವೃತ್ತಿ ಯನ್ನಾಗಿಸಿಕೊಂಡಿದ್ದರು. ಹೀಗಾಗಿ ವಿಚಾರಣೆ ನಡೆಸುತ್ತಿದ್ದಾರೆ. ಈ ಅಕ್ರಮದಲ್ಲಿ ಯಾರೇ ಇದ್ದರೂ ಅವರನ್ನ ಬಿಡೋದಿಲ್ಲ ಎಂದು ಸಚಿವರು ಹೇಳಿದ್ದಾರೆ.

 

 

Leave a Reply

Your email address will not be published.