ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆದೇಶದಿಂದ ಪಿಯು ಬೋರ್ಡ್ ಹೊಸ ಸುತ್ತೋಲೆಯನ್ನು ಹೊರಡಿಸಿದೆ.. ಅದರಂತೆ ಯಾವುದೇ ವಿದ್ಯಾರ್ಥಿಗಳು ಮೊಬೈಲ್ ಮತ್ತು ಲ್ಯಾಪ್ಟಾಪ್ ಅನ್ನ ಕಾಲೇಜಿಗೆ ತೆಗೆದುಕೊಂಡು ಹೋಗುವಂತಿಲ್ಲ.. ಈ ನೂತನ ಆದೇಶ ವಿದ್ಯಾರ್ಥಿಗಳ ಮತ್ತು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ..
ಹೌದು.. ಸಿ.ಎಂ ಕುಮಾರಸ್ವಾಮಿ ಅವರ ಆದೇಶದಂತೆ, ಪಿಯು ಬೋರ್ಡ್ ಹೊಸ ಸುತ್ತೋಲೆಯೊಂದನ್ನ ಹೊರಡಿಸಿದೆ.. ಅದರಂತೆ ಇನ್ಮುಂದೆ ಯಾವುದೇ ಪಿಯುಸಿ ವಿದ್ಯಾರ್ಥಿಗಳು, ಕಾಲೇಜಿಗೆ ಮೊಬೈಲ್ ಮತ್ತು ಲ್ಯಾಪ್ಟಾಪ್ಗಳನ್ನ ತರಗತಿಗೆ ಕೊಂಡೊಯ್ಯುವಂತಿಲ್ಲ.. ಹೀಗಂತ ಸುತ್ತೋಲೆಯನ್ನ ಹೊರಡಿಸೋ ಮೂಲಕ ವಿವಾದಕ್ಕೆ ಗುರಿಯಾಗಿದೆ..
ಇನ್ಮುಂದೆ ಪಿಯುಸಿ ವಿದ್ಯಾರ್ಥಿಗಳು ತರಗತಿಗಳಿಗೆ ಮೊಬೈಲ್ ಮತ್ತು ಲ್ಯಾಪ್ಟಾಪ್ ಅನ್ನ ತರುವಂತಿಲ್ಲ ಅನ್ನೋ ನೂತನ ಸುತ್ತೋಲೆ, ವಿದ್ಯಾರ್ಥಿಗಳಿಗೆ ಆಕ್ರೋಶವನ್ನು ತರಿಸಿದೆ.. ಸರ್ಕಾರದಿಂದಲೇ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ಅನ್ನು ಕೊಡಲಾಗುತ್ತಿದೆ.. ಆದರೆ, ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್ ಟಾಪ್ ಮತ್ತು ಮೊಬೈಲ್ ಅನ್ನ ತರುವಂತಿಲ್ಲ ಅಂತ ಆದೇಶ ಹೊರಡಿಸಿದ್ದು, ಲಕ್ಷಾಂತರ ಪಿ.ಯು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ..
ಅದರಲ್ಲೂ ಕಾಮರ್ಸ್ ಮತ್ತು ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಬೇಸರ ಕೂಡ ತರಿಸಿದೆ.. ಸುರಕ್ಷತೆಯ ದೃಷ್ಟಿಯಿಂದ ಕನಿಷ್ಠ ಬೇಸಿಕ್ ಸೆಟ್ ಬಳಕೆಗಾದ್ರೂ ಅವಕಾಶ ನೀಡುವಂತೆ ಮನವಿ ಮಾಡಿದ್ರು..ಪ್ರಜಾಟಿವಿ ವರಧಿ ಫಲಶೃತಿ..!ಮೊಬೈಲ್ ಬಳಕೆ ಮಾತ್ರ ನಿಷೇಧ..!:ಸುತ್ತೋಲೆ ಬಗ್ಗೆ ಪ್ರಜಾಟಿವಿ ವರದಿ ಮಾಡಿದ್ದು, ಪಿಯು ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.. ನೂತನ ಸುತ್ತೋಲೆ ಬಗ್ಗೆ ಮಾತನಾಡಿದ ಪಿಯು ಬೋರ್ಡ್ ಶೈಕ್ಷಣಿಕ ವಿಭಾಗದ ಉಪ ನಿರ್ದೇಶಕ ಅಸಾದುಲ್ಲಾ ಖಾನ್..
ಲ್ಯಾಪ್ಟಾಪ್ ನಿಷೇಧ ಇಲ್ಲ, ಕೇವಲ ಮೊಬೈಲ್ ಬಳಕೆ ಮಾತ್ರ ನಿಷೇಧ ಮಾಡಲಾಗಿದೆ.. ಕಣ್ತಪ್ಪಿನಿಂದ ಲ್ಯಾಪ್ಟಾಪ್ ಸೇರಿಸಲಾಗಿತ್ತು, ಆದ್ರೆ ಶೈಕ್ಷಣಿಕ ಹಿತದೃಷ್ಟಿಯಿಂದ ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಅಂತ ಸ್ಪಷ್ಟಪಡಿಸಿದ್ರು..
ಸಣ್ಣಪುಟ್ಟ ಮಕ್ಕಳೂ ಮೊಬೈಲ್ ಬಳಕೆ ಮಾಡೋ ಈ ಕಾಲದಲ್ಲಿ, ಪಿ.ಯು ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಮಾಡಬೇಡಿ ಅಂದ್ರೆ ಯಾರ್ ತಾನೆ ಕೇಳ್ತಾರೆ.. ಆದ್ರೆ ಇವತ್ತಿನ ವಿದ್ಯಾಮಾನಗಳಲ್ಲಿ ಮೊಬೈಲ್ ಬಳಕೆ ಎಷ್ಟು ಮುಖ್ಯವೋ, ಅದರಿಂದ ಬೀರುತ್ತಿರೋ ಪರಿಣಾಮಗಳು ಅಷ್ಟೇ ಗಂಭೀರವಾಗಿದೆ.. ಹೀಗಾಗಿ ಪೋಷಕರು ಮಕ್ಕಳಿಗೆ ಮೊಬೈಲ್ ಕೊಡಬೇಕೋ, ಬೇಡವೋ ಅನ್ನೋ ಗೊಂದಲದಲ್ಲಿರೋದು ಸುಳ್ಳಲ್ಲ..