ಪಬ್, ಬಾರ್ ನಿಗದಿತ ಸಮಯದಲ್ಲಿ ಬಂದ್ & ಅಪ್ರಾಪ್ತರಿಗೆ ನಿಷೇಧ: ಪೊಲೀಸರಿಂದ ಆದೇಶ

ಜಿಲ್ಲೆ

ಬೆಂಗಳೂರು: ಬಾರ್ ಮತ್ತು ಪಬ್​​ಗಳನ್ನು ನಿಗದಿತ ಸಮಯದಲ್ಲಿ ಬಂದ್ ಹಾಗೂ ಅಪ್ರಾಪ್ತರಿಗೆ ಪ್ರವೇಶ ನಿಷೇಧಿಸಿ ಬೆಂಗಳೂರು ಪೊಲೀಸರು ಆದೇಶ ಹೊರಡಿಸಿದ್ದಾರೆ. ಬಾರ್ ಮತ್ತು ಪಬ್​ ಮಾಲಿಕರು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬೆಂಗಳೂರು ಪೊಲೀಸರು ಖಡಕ್​​ ಎಚ್ಚರಿಕೆ ನೀಡಿದ್ದಾರೆ. ಅಪ್ರಾಪ್ತರಿಗೆ ಪ್ರವೇಶ ನೀಡಿದ್ದ ಪಬ್ ಮತ್ತು ಬಾರ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸರು ಪ್ರತಿನಿತ್ಯ ಎಲ್ಲಾ ಪಬ್ ಮತ್ತು ಬಾರ್​ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಿಯಮ ಉಲ್ಲಂಘಿಸಿದ ಕೇಂದ್ರ ವಿಭಾಗದ 9 ಪಬ್ ಅಂಡ್ ಬಾರ್ ಮೇಲೆ ಪ್ರಕರಣ ದಾಖಲಾಗಿದೆ. ಪಶ್ಚಿಮ ವಿಭಾಗದಲ್ಲಿ ಒಂದು ಪ್ರಕರಣ ದಾಖಲಾಗಿದೆ. ಪೂರ್ವ ವಿಭಾಗದಲ್ಲಿ 79 ಪಬ್ ಮತ್ತು ಬಾರ್​ಗಳಲ್ಲಿ ಏಕಕಾಲಕ್ಕೆ ಪರಿಶೀಲನೆ ಮಾಡಲಾಗಿದೆ. ಉತ್ತರ ವಿಭಾಗದಲ್ಲಿ ಒಟ್ಟು 3 ಪ್ರಕರಣ ದಾಖಲಾಗಿದೆ. ಅಗ್ನೇಯ ವಿಭಾಗದಲ್ಲಿ ನಿಯಮ ಉಲ್ಲಂಘಿಸಿದ 2 ಪಬ್ ಮತ್ತು ಬಾರ್ ಮೇಲೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published.