
ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ಕತ್ತೆ..!
ಸಿಂಧನೂರು : ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಮನುಷ್ಯರು ತಪಾಸಣೆ ಮಾಡಿಸಿಕೊಳ್ಳಲು ಬರುವುದು ಸಾಮಾನ್ಯ. ಆದರೆ ಈ ಒಂದು ಆಸ್ಪತ್ರೆಯಲ್ಲಿ ಇಂದು ಜನರ ನಡುವೆ ಕಥೆಯೊಂದು ಪ್ರತ್ಯಕ್ಷವಾಗಿ ಅಚ್ಚರಿಯ ಉಂಟು ಮಾಡಿದೆ. ಇನ್ನು ಅಲ್ಲಿ ನೆರೆದ ಜನ ಇಲ್ಲಿ ಯಾವ ವೈದ್ಯರ ಬಳಿ ತೋರಿಸಿಕೊಳ್ಳಲು ಬಂದಿದೆ ಎಂದು ಮಾತನಾಡಿಕೊಳ್ಳುತ್ತಿರುವುದು ಹಾಸ್ಯಸ್ಪದಕ್ಕಿಡಾಗಿತ್ತು.
ಹೌದು ಸಿಂಧನೂರು ನಗರದಲ್ಲಿ ಇರುವಂತಹ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಇಷ್ಟು ದಿನಗಳ ಕಾಲ ನಾಯಿ, ಹಂದಿಗಳ ಕಾಟ ಹೆಚ್ಚಾಗಿತ್ತು. ಇದೀಗ ನೇರವಾಗಿ ಕತ್ತೆಗಳು ಆಸ್ಪತ್ರೆಯ ಒಳಗೆ ನಗುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇಂದು ಆಸ್ಪತ್ರೆಯ ಆಡಳಿತ ವರ್ಗ ಮತ್ತು ಸಿಬ್ಬಂದಿಗಳ ನಿರ್ಲಕ್ಷದಿಂದ ಇಂದು ಕತ್ತೆಯೆಂದು ನೇರವಾಗಿ ಸಾರ್ವಜನಿಕ ಆಸ್ಪತ್ರೆಯೊಳಗೆ ನುಗ್ಗಿ ಕೆಲ ಹೊತ್ತು ಸಾರ್ವಜನಿಕರಿಗೆ ಆತಂಕ ಉಂಟು ಮಾಡಿತ್ತು.