ಸುಟ್ಟು ಹೋದ ಕೃಷಿ ಪಂಪ್ ಸೆಟ್ ಗಳ ಟಿಸಿ 24 ಗಂಟೆಯೊಳಗೆ ಬದಲಾವಣೆ: ಸಚಿವ ಸುನಿಲ್ ಕುಮಾರ್

ರಾಜಕೀಯ

ಬೆಂಗಳೂರು: ಕೃಷಿ ಪಂಪ್‍ಸೆಟ್ ಗಳಿಗೆ ಅಳವಡಿಸಿರುವ ಟಿಸಿಗಳು ಸುಟ್ಟು ಹೋದಾಗ ಅದನ್ನು ಬದಲಿಸುವ ಕಾರ್ಯವನ್ನು 24 ಗಂಟೆ ಗಳಲ್ಲಿ ನಿರ್ವಹಿಸಲಾ ಗುತ್ತಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ಅವಯಲ್ಲಿ ಸದಸ್ಯ ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ಟಿಸಿ ಹಾಕುವಲ್ಲಿ ಸ್ವಲ್ಪ ವಿಳಂಬ ಆಗುತ್ತಿರಬಹುದು. ಆದರೆ, ನಿರಂತರವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಇನ್ನೂ ಟಿಸಿ ಅಳವಡಿಸುವ ಕೆಲಸವನ್ನು ಖಾಸಾಗಿಯವರಿಗೆ ವಹಿಸಲು ಸಾಧ್ಯವಿಲ್ಲ. ಇದನ್ನು ಕರ್ನಾಟಕ ವಿದ್ಯುತ್ ಕಾರ್ಖಾನೆ ತಯಾರಿಸುತ್ತಿದ್ದು, ಹೀಗಾಗಿ ಖಾಸಾಗಿಯವರಿಗೆ ವಹಿಸಲಾಗದು ಎಂದು ಸಚಿವರು ಸ್ವಷ್ಟಪಡಿಸಿದರು.

Leave a Reply

Your email address will not be published.