
ಪುನೀತ್ ನಿಧನವನ್ನು ಅಣಕಿಸುವ ರೀತಿಯಲ್ಲಿ ಟ್ವೀಟ್: ಅಪ್ಪು ಅಭಿಮಾನಿಗಳಿಗೆ ಕ್ಷಮೆ ಕೇಳಿದ ಚಕ್ರವರ್ತಿ ಸೂಲಿಬೆಲೆ
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸುವ ಭರದಲ್ಲಿ ಪುನೀತ್ ರಾಜ್ ಕುಮಾರ್ ನಿಧನವನ್ನು ಅಣಕಿಸುವ ರೀತಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಟ್ವಿಟ್ ಮಾಡಿದ್ದಾರೆ. ಈ ಹಿನ್ನೆಲೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಚಿಂತಕ ಚಕ್ರವತಿ ಸೂಲಿಬೆಲೆ ವಿರುದ್ಧ ಗರಂ ಆಗಿದ್ದಾರೆ. ಪುನೀತ್ ನಿಧನರಾದಾಗ ಮುಖ್ಯಮಂತ್ರಿಗಳು ಮೂರು ದಿನಗಳ ಸಮಯವನ್ನು ಅವರಿಗಾಗಿ ವ್ಯಯಿಸಿದರು ಎಂದು ಲೇವಡಿ ರೂಪದಲ್ಲಿ ಸೂಲಿಬೆಲೆ ಟ್ವಿಟ್ ಮಾಡಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದರು. ಬಿ.ಜೆ.ಪಿ ಸರ ಕಾರದ ವಿರುದ್ಧ ಅಥವಾ ಬಸವರಾಜ ಬೊಮ್ಮಾಯಿ ವಿರುದ್ಧ ಚಕ್ರವತಿ ಸೂಲಿಬೆಲೆ ಅವರು ಏನಾದರೂ ಕಾಮೆಂಟ್ ಮಾಡಲಿ.
ಅಪ್ಪು ನಿಧನವನ್ನು ಇಂದಿಗೂ ನಮ್ಮಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಂತಹದರಲ್ಲಿ ಅವಮಾನ ಮಾತುಗಳನ್ನು ಕೇಳುವುದಕ್ಕೆ ಸಾಧ್ಯ ವಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕ ಅಭಿಮಾನಿಗಳು ಸೂಲಿಬೆಲೆಗೆ ಕಾಮೆಂಟ್ ಮಾಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಸೂಲಿಬೆಲೆ ಅವರು ಕ್ಷಮೆ ಕೇಳಿದ್ದಾರೆ. ಈ ಕುರಿತಂತೆ ವಿಡಿಯೋ ಸಮೇತ ಟ್ವಿಟ್ ಮಾಡಿರುವ ಸೂಲಿಬೆಲೆ ‘ಈ ಟ್ವಿಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವಿಟ್ ಅನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಬರೆದಿದ್ದಾರೆ.