ಬೆಂಗಳೂರು. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸೈಲೆಂಟ್ ಆಗಿ ಇದ್ದು ಕೊಂಡೇ ಪಟಾಕಿ ಹೊಡೆಯೋದು ಜಾಸ್ತಿ. ಅಪ್ಪು ಸ್ಟೈಲೇ ಅಂತದ್ದು. ಈಗ ಮತ್ತೊಮ್ಮೆ ಪುನೀತ್ ಹೊಸಟ್ರೆಂಡ್ ಸೃಷ್ಟಿಸೋ ಓಟದಲ್ಲಿದ್ದಾರೆ. ಮುಖದ ತುಂಬಾ ಗಡ್ಡ ಬಿಟ್ಟು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಪಂಚ್ ಕೊಟ್ಟಿದ್ದಾರೆ.
ಪುನೀತ್ ಸಾಮಾನ್ಯವಾಗಿ ಗಡ್ಡ ಬಿಡೋ ಗೋಜಿಗೆ ಹೋಗಲ್ಲ. ಸಿನಿಮಾಗಳಲ್ಲೂ ದೊಡ್ಮನೆ ಹುಡುಗನ ಲುಕ್ ಕ್ಲೀನ್ ಶೇವ್ ರೂಪವನ್ನೇ ಹೊಂದಿರುತ್ತೆ. ಆದರೆ ಈ ಕೊರೊನಾ ಹೊಡೆತದಿಂದ ಕನ್ನಡ ಚಿತ್ರರಂಗದ ಕೆಲಸಕಾರ್ಯಗಳು ಸ್ಥಗಿತಗೊಂಡಿತ್ತು. ಮನೆಯಲ್ಲೇ ಜಿಮ್ ಮಾಡಿಕೊಂಡು ಕಾಲಕಳೆಯುತ್ತಿದ್ದ ಪುನೀತ್ ಈಗ ತಮ್ಮ ಬಿರ್ಯಡ್ ಲುಕ್ ಮೂಲಕ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದ್ದಾರೆ. ಜೊತೆಗೆ ಅಭಿಮಾನಿಗಳಿಗೂ ಈ ಲುಕ್ ಹಿಂದಿನ ರಹಸ್ಯವೇನು ಎನ್ನುವ ಕುತೂಹಲ ದೊಡ್ಡಮಟ್ಟದಲ್ಲೇ ಇದೆ.
ಮೊನ್ನೆಯಷ್ಟೇ ಯುವರತ್ನ ಚಿತ್ರದ ನಿರ್ದೆಶಕ ಸಂತೋಷ್ ಆನಂದ್ರಾಮ್ ಸಹೋದರನ ಮದುವೆಗೆ ಹಾಜರಾದ ಪುನೀತ್ ರಾಜ್ಕುಮಾರ್ ತಮ್ಮ ಹೊಸ ಅವತಾರದ ಮೂಲಕ ಎಲ್ಲರನ್ನ ಅಚ್ಚರಿಗೊಳಿಸಿದ್ದಾರೆ. ಲೈಟಾಗಿ ಗಡ್ಡ ಬಿಟ್ಟಿದ್ದ ದೊಡ್ಮನೆ ಹುಡುಗ ಎಲ್ಲರನ್ನ ಆಶ್ಚರ್ಯಕೂಪಕ್ಕೆ ತಳ್ಳಿಬಿಟ್ಟಿದ್ರು. ಪುನೀತ್ ಹೊಸ ಗಡ್ಡದ ಚಾರ್ಮ್ ಹೇಗಿತ್ತು ಎನ್ನುವ ಅಂಶ ಈ ಫೋಟೊಗಳಲ್ಲಿ ಪ್ರಮುಖವಾಗಿ ಹೈಲೇಟ್ ಆಗುತಿದೆ.
ವಧುವರರಿಗೆ ಶುಭಹಾರೈಸಿದ ಪುನೀತ್ ಫುಲ್ ಹ್ಯಾಪಿ ಮೂಡ್ನಲ್ಲಿದ್ರು. ಸ್ವಲ್ಪ ದಿನಗಳಿಂದ ಮನೆಯಲ್ಲೇ ಇರೊದ್ರಿಂದ ಈ ಗಡ್ಡದ ಪ್ರಯೋಗಕ್ಕೆ ಪುನೀತ್ ಕೈ ಹಾಕಿದ್ರಾ ಎನ್ನುವ ಸಂಶಯವೂ ಸೃಷ್ಟಿಯಾಗಿದೆ. ಆದರೆ ಪುನೀತ್ಗೆ ಈ ಲುಕ್ ಸಕತ್ತಾಗೆ ಸೂಟ್ ಆಗ್ತಿದೆ ಎಂಬುದು ಪುನೀತ್ ಅಭಿಮಾನಿಗಳ ಸ್ವೀಟ್ ವಾದ. ಬಿರ್ಯಡ್ ಲುಕ್ಗೆ ಪುನೀತ್ ಜೈ ಅಂದಿದ್ಯಾಕೆ ಎನ್ನುವ ಪ್ರಶ್ನೆ ಮಾತ್ರ ಹಾಗೇ ಉಳಿದುಕೊಂಡಿದೆ. ಇದು ಒಂದು ವಿಭಿನ್ನ ಪ್ರಯೋಗವೋ ಅಥವಾ ಯಾರಿಗೂ ತಿಳಿಸದ ಪಾತ್ರದ ತಯಾರಿಯೋ, ಉತ್ತರವನ್ನ ಖುದ್ದಾಗಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನೀಡಬೇಕಾಗಿದೆ.