Home District ಕ್ವಾರಂಟೈನ್ ಕೇಂದ್ರದಿಂದ ಸೋಂಕು ಶಂಕಿತರು ಹೊರಬಂದಿದ್ದು ಯಾಕೆ ?

ಕ್ವಾರಂಟೈನ್ ಕೇಂದ್ರದಿಂದ ಸೋಂಕು ಶಂಕಿತರು ಹೊರಬಂದಿದ್ದು ಯಾಕೆ ?

378
0
SHARE

ಬೆಂಗಳೂರು ಗ್ರಾಮಾಂತರ. ರಾಜ್ಯದಲ್ಲೆ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಂಖ್ಯೆ ಹೆಚ್ಚಾದಂತೆ ಕೊರೊನಾ ಹಬ್ಬಿರುವ ರೋಗಿಗಳ ಸಂಪರ್ಕದಲ್ಲಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇನ್ನೂ ಒಂದ್ಕಡೆ ಸೋಂಕಿತರಿಗೆ ಬೆಡ್‌ಗಳನ್ನ ಒದಗಿಸಲು ಸರ್ಕಾರ ತಿಣುಕಾಡುತ್ತಿದ್ರೆ, ಇತ್ತ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಮಂದಿಗೆ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸುವಲ್ಲಿ ವಿಫಲವಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ೪೦ ಕ್ಕು ಹೆಚ್ಚು ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ಆದ್ರೆ ಇವರಿಗೆ ಅಧಿಕಾರಿಗಳು ಮೂಲಭೂತ ಸೌಲಭ್ಯಗಳನ್ನ ಕೊಡವಲ್ಲಿ ನಿರ್ಲಕ್ಷ್ಯವಹಿಸಿದ್ದು, ರೊಚ್ಚಿಗೆದ್ದ ಕ್ವಾರಂಟೈನ್ ಮಂದಿ ಹಾಸ್ಟೆಲ್‌ನಿಂದ ಹೊರ ಬಂದು ಪ್ರತಿಭಟನೆಯನ್ನ ನಡೆಸಿ ಅಧಿಕಾರಿಗಳ ವಿರುದ್ದ ಆಕ್ರೋಶವನ್ನ ಹೊರಹಾಕಿದ್ದಾರೆ.

ಮುಖ್ಯವಾಗಿ ಬೇರೆ ಬೇರೆ ದೇಶಗಳಿಂದ ಆಗಮಿಸಿರುವ ಪ್ರಯಾಣಿಕರನ್ನ ಇಲ್ಲಿಗೆ ತಂದು ಕ್ವಾರಂಟೈನ್ ಮಾಡಲಾಗಿದೆ. ಆದ್ರೆ ಇವರಿಗೆ ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆ, ನೀರಿನ ವ್ಯವಸ್ಥೆಯನ್ನ ಅಧಿಕಾರಿಗಳು ಮಾಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.  ಹೀಗಾಗಿ ಇಂದು ಕ್ವಾರಂಟೈನ್‌ನಲ್ಲಿರುವವರು ನಮ್ಮನ್ನ ಮನೆಗೆ ಕಳಿಸಿಬಿಡಿ ನಮ್ಮ ಸೌಕರ್ಯಗಳನ್ನ ನೋಡಿಕೊಳ್ತೇವೆ ಅಂತಾ ಹರಿಹಾಯ್ದಿದ್ದಾರೆ.

ಜತೆಗೆ ೧೧ ದಿನಗಳಿಂದ ಕೆಲವರನ್ನ ಕ್ವಾರಂಟೈನ್ ಮಾಡಲಾಗಿದ್ದು, ನಮಗೆ ಪರೀಕ್ಷೆ ನಡೆಸಿದ್ದರು ಇದುವರೆಗೂ ವರದಿ ಬಂದಿಲ್ಲ ಅಂತಾ ಆಕ್ರೋಶ ಹೊರಹಾಕಿದ್ದು, ಕರ್ನಾಟಕ ಸರ್ಕಾರ ಕ್ವಾರಂಟೈನ್‌ ನಲ್ಲಿದ್ದವರನ್ನ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಅಂತಾ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಅಲ್ಲದೆ ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆಗೆ ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳು ಖರ್ಚು ಮಾಡದೇ ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆಂದು ಆರೋಪ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here