Home District ಕ್ವಾರಂಟೈನ್ ಕೇಂದ್ರಗಳಲ್ಲಿ ಜನರ ಪರದಾಟ ; ಸರ್ಕಾರದ ವಿರುದ್ದ ಅಸಮಾಧಾನ

ಕ್ವಾರಂಟೈನ್ ಕೇಂದ್ರಗಳಲ್ಲಿ ಜನರ ಪರದಾಟ ; ಸರ್ಕಾರದ ವಿರುದ್ದ ಅಸಮಾಧಾನ

188
0
SHARE

ಬೆಂಗಳೂರು ಗ್ರಾಮಾಂತರ.  ರಾಜ್ಯದಲ್ಲಿ ಕೊರೊನಾ ಮಾಹಮಾರಿ ರಣಕೆಕೆ ಹಾಕುತ್ತಿದೆ. ಇನ್ನೂ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಮಂದಿಗೆ ಸರಿಯಾದ ವ್ಯವಸ್ಥೆ ಹಾಗೂ ಊಟ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಅಂದಹಾಗೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಲ್ಲಿ ಅನಿವಾಸಿ ಭಾರತೀಯರನ್ನ ಕರೆತಂದು ೯೦ ಕ್ಕು ಅಧಿಕ ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ.

ಆದ್ರೆ ಕಳೆದ ರಾತ್ರಿಯಿಂದಲೂ ಊಟ ಸರಬರಾಜು ಮಾಡದ ಅಧಿಕಾರಿಗಳ ವಿರುದ್ದ ಕ್ವಾರಂಟೈನ್ ನಲ್ಲಿರುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ನಮ್ಮನ್ನ ಮನೆಗೆ ಕಳಿಸಿ ಅಂತಾ ಹಾಸ್ಟೆಲ್ ಹೊರಗಡೆ ಬಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಅನಿವಾಸಿ ಭಾರತೀಯರು ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜತೆಗೆನ ಒಂದೇ ಹಾಸ್ಟೆಲ್ ನಲ್ಲಿ ಮಹಿಳೆಯರು ಹಾಗೂ ಪುರುಷರನ್ನ ತುಂಬಲಾಗಿದ್ದು ನೀರಿನ ವ್ಯವಸ್ಥೆ ಹಾಗೂ ಬಾತ್ ರೂಮ್ ಸ್ವಚ್ಚತೆ ಇಲ್ಲ ಅಂತಾ ಕ್ವಾರಂಟೈನ್‌ನಲ್ಲಿದ್ದವರು ಅಳಲನ್ನ ತೋಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here